ಕುಶಾಲನಗರ ಡಿ 3: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶ ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಸಮಾವೇಶ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು,
ಜಿಲ್ಲೆಯ ಉತ್ಸಾಹಿ ಶಾಸಕರಿಂದ ಹಲವಷ್ಟು ಅಭಿವೃದ್ದಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿರುವುದು ಶ್ಲಾಘನೀಯ ವಿಚಾರ. ರಾಜಕೀಯ ಪಕ್ಷಕ್ಕೆ ಸಂಘಟನೆಯೇ ಜೀವಾಳ. ಕಾರ್ಯಕರ್ತರು ಮುಖಂಡರ ಸಂಪರ್ಕ ನಿರಂತರವಾಗಿದ್ದಾಗ ಪಕ್ಷದ ಮೇಲಿನ ಅಭಿಮಾನ ಹೆಚ್ಚುತ್ತದೆ.
ಸರಕಾರದ 4 ಗ್ಯಾರೆಂಟಿಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದರು.
ಸಮಸ್ಯೆಗಳನ್ನು ನೇರವಾಗಿ ಶಾಸಕರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕಿದೆ. ದೇಶದಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅಗತ್ಯವಿದೆ ಎಂದರು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಕಾಂಗ್ರೆಸ್ ಮೇಲಿನ ಕಾರ್ಯಕರ್ತರ ನಂಬಿಕೆ ಬಹಳ ದೊಡ್ಡದಿದೆ. ಪಕ್ಷಾತೀತವಾಗಿ ಕ್ಷೇತ್ರದ ಸಾರ್ವಜನಿಕರಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯ. ಎಲ್ಲರನ್ನೂ ಸಮಾನರಾಗಿ ಕಾಣುವ ಮನಸ್ಥಿತಿ ಹೊಂದುವುದು ಅಗತ್ಯವಿದೆ. ಈ ವಿಚಾರವನ್ನು ಕಾಂಗ್ರೆಸಿಗರು ಮನಗಾಣಬೇಕಿದೆ. ಕ್ಷೇತ್ರದಲ್ಲಿ ಹತ್ತು ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೆ ಚಾಲನೆಗೊಳಿಸಲಾಗಿದೆ. ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ತುಚ್ಚವಾಗಿ ಕಾಣಬಾರದು. ದ್ವೇಷದ ರಾಜಕಾರಣ ಸಲ್ಲದು ಎಂದರು.
ರಾಜ್ಯ ವಕ್ತಾರ,
ಚಂದ್ರಮೌಳಿ ಮಾತನಾಡಿ, ಕೊಡಗು ಜಿಲ್ಲೆಗೊಂದು ಸಚಿವ ಸ್ಥಾನದ ಅಗತ್ಯವಿದೆ. ಬಿಜೆಪಿಯ ಬೇರು ಕಿತ್ತೊಗೆಯಬೇಕಾದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಳ್ಳಬೇಕಾಗಿದೆ. ಕೊಡಗಿನವರು ಸಂಸದರಾಗಬೇಕೆನ್ನುವುದು ಜಿಲ್ಲೆಯ ಜನರ ಆಶಯ ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಎಂಎಲ್ಸಿ ನಾಗರಾಜ್,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಕೆ.ಪಿ.ಚಂದ್ರಕಲಾ, ಶಿಕ್ಷಕರ ಕ್ಷೇತ್ರ ಅಭ್ಯರ್ಥಿ
ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡುರಾವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕೆಪಿಸಿಸಿ ಸಂಯೋಜಕ ನಟೇಶ್ ಗೌಡ, ಜಿಲ್ಲಾ ಯುವ ಘಟಕ ಅಧ್ಯಕ್ಷ ಮಿಥುನ್ ಹಾನಗಲ್, ಮಹಿಳಾ ಕಾಂಗ್ರೆಸ್ ನ ಸುರಯ್ಯ ಅಬ್ರಾರ್, ಬ್ಲಾಕ್ ಅಧ್ಯಕ್ಷರುಗಳಾದ ವಿ.ಪಿ.ಶಶಿಧರ್, ಸತೀಶ್, ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪ್ರಮುಖರಾದ ಚಿನ್ನಪ್ಪ, ಟಿ.ಪಿ.ಹಮೀದ್, ಬಿ.ಡಿ.ಅಣ್ಣಯ್ಯ, ತೆನ್ನಿರ ಮೈನಾ, ರಾಜೇಶ್ ಯಲ್ಲಪ್ಪ, ಸುರೇಶ್ ಸೇರಿದಂತೆ
ವಿವಿಧ ಮುಂಚೂಣಿ ಘಟಕ, ತಾಲೂಕು ಘಟಕದ ಪ್ರಮುಖರು ಇದ್ದರು.
Back to top button
error: Content is protected !!