ಕುಶಾಲನಗರ ನ 27 : ನಮ್ಮ ಕ್ಲಿನಿಕ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಪಡಿಸಿಕೊಳ್ಳುವಂತೆ ಶಾಸಕ ಡಾ.ಮಂಥರ್ ಗೌಡ ಕರೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಿಎಂ ರಸ್ತೆಯಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್ ಗೆ ಚಾಲನೆ ನೀಡಿ ಮಾತನಾಡಿದ ಅವರು,
ನಮ್ಮ ಕ್ಲಿನಿಕ್ ಆರಂಭಿಸಿರುವ ಕಾರಣ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒತ್ತಡ ನಿವಾರಣೆಯಾಗಲಿದೆ. ಇಲ್ಲಿ ಕೂಡ ನುರಿತ ವೈದ್ಯ, ತಾಂತ್ರಿಕ ಸಿಬ್ಬಂದಿಗಳು ಲಭ್ಯವಿದ್ದು ಡೇ ಕ್ಲಿನಿಕ್ ಮಾದರಿಯ ಸೌಲಭ್ಯವನ್ನು ಸಾರ್ವಜನಿಕರ ಬೆಳಗ್ಗೆ 9.30 ರದ ಸಂಜೆ 4.30 ರ ತನಕ ಪಡೆದುಕೊಳ್ಳುವ ಅವಕಾಶವಿದೆ.
ಗರ್ಭಿಣಿಯರು, ನವಜಾತವಶಿಶುಗಳ ಆರೈಕೆ ಸೇರಿದಂತೆ ಹೊರರೋಗಿಗಳು ಚುಚ್ಚುಮದ್ದು, ವಾಕ್ಸಿನೇಷನ್ ಪಡೆದುಕೊಳ್ಳಲು ಇಲ್ಲಿ ಅನುಕೂಲ ಕಲ್ಪಿಸಲಾಗಿದೆ
ಎಂದರು.
ವಿವಿಧ ಮಾದರಿಯ ಪರೀಕ್ಷೆಗಳನ್ನು ಖಾಸಗಿ ಲ್ಯಾಬ್ ಗಳಿಗೆ ಸೂಚಿಸುವ ಬದಲಾಗಿ,
ಆದಷ್ಟು ಎಲ್ಲಾ ಪರೀಕ್ಷೆಗಳನ್ನು ಇಲ್ಲಿಯೇ ಮಾಡಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ ಶಾಸಕರು, ಮಡಿಕೇರಿಯಲ್ಲಿ ಕೂಡ ನಮ್ಮ ಕ್ಲಿನಿಕ್ ಸ್ಥಾಪನೆಗೆ ಕ್ರಮವಹಿಸಲು ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿದರು.
ಈ ಸಂದರ್ಭ ಕುಶಾಲನಗರ ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಸದಸ್ಯರಾದ ಎಂ.ಕೆ.ದಿನೇಶ್, ಎಂ.ಬಿ.ಸುರೇಶ್, ಶೇಖ್ ಖಲೀಮುಲ್ಲಾ, ಜಯಲಕ್ಷ್ಮಿ, ಪುಟ್ಟಲಕ್ಷ್ಮಿ, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಜಿಪಂ ಮಾಜಿ ಸದಸ್ಯೆ ಸುನಿತಾ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಕಿರಣ್, ಜೋಸೆಫ್ ವಿಕ್ಟೃ ಸೋನ್ಸ್, ನಟೇಶ್ ಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.
Back to top button
error: Content is protected !!