ಟ್ರೆಂಡಿಂಗ್
ವಿದ್ಯುತ್ ಸ್ಪರ್ಶ, ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಸಾವು


ಕುಶಾಲನಗರ, ನ 09: ವಿದ್ಯುತ್ ಸ್ಪರ್ಶಗೊಂಡು ವಿರಾಜಪೇಟೆ ಚೆಸ್ಕಾಂ ಸಿಬ್ಬಂದಿ ಅನಿಲ್ ಮೆನೆಜಸ್,(42) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ರಾತ್ರಿ ಪಾಳೆಯದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಆರ್ಜಿ ಸರ್ಕಾರಿ ಶಾಲೆಯ ಪಕ್ಕದ ರಸ್ತೆಯಲ್ಲಿ ವಿದ್ಯುತ್ ಇಲ್ಲದ ಕಾರಣ ವಿದ್ಯುತ್ ಸರಿಪಡಿಸುವ ವೇಳೆ ವಿದ್ಯುತ್ ಸ್ಪರ್ಶ ಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಹತ್ತು ಗಂಟೆಗೆ ನಡೆದ ಘಟನೆ ವಿರಾಜಪೇಟೆ ನಗರ ಪೊಲೀಸ್ ಠಾಣೆ ಯಲ್ಲಿ ಮೊಕದ್ದಮೆ ದಾಖಲಾಗಿದೆ.