ಕುಶಾಲನಗರ ಅ.28 : ತಾಲ್ಲೂಕು ವಾಲ್ಮೀಕಿ ವಸತಿ ಶಾಲೆಯ ಹೊರ ಸಂಪನ್ಮೂಲ ಶಿಕ್ಷಕರು ವೇತನ ಪರಿಷ್ಕರಣೆ, ಸೇವಾ ಭದ್ರತೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಶಿಕ್ಷಕರು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರಿಗೆ ಕುಶಾಲನಗರದಲ್ಲಿ ಮನವಿಯನ್ನು ಸಲ್ಲಿಸಿದರು.
ಕಳೆದ 20 ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಹೊರ ಸಂಪನ್ಮೂಲ ಶಿಕ್ಷಕರ ನೇಮಕಾತಿಯ ನಿಯಮದಡಿ ತಾಲ್ಲೂಕು ವ್ಯಾಪ್ತಿಯ ವಿವಿಧ ವಾಲ್ಮೀಕಿ ಶಾಲೆಗಳಿಗೆ ವಿವಿಧ ವಿಷಯಗಳ ಭೋದನೆ ಮಾಡುವ ಶಿಕ್ಷಕರು ನೇಮಕಗೊಂಡು ಅನೇಕ ವರ್ಷಗಳು ಕಳೆದರೂ ಇದುವರೆಗೂ ವೇತನ ಪರಿಷ್ಕರಣೆ, ಮತ್ತು ಖಾಯಂ ವಿಶೇಷ ನೇಮಕಾತಿ, ಸೇವಾ ಭದ್ರತೆಗೆ ಸೇರಿದಂತೆ ಸೌಲಭ್ಯಗಳ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರಿಗೆ ಯಡವನಾಡು , ಮತ್ತು ಬಸವನಹಳ್ಳಿ, ಮಾಲಂಬಿ, ವಾಲ್ಮೀಕಿ ವಸತಿ ಶಾಲೆಯ ಶಿಕ್ಷಕರ ವೃಂದದವರು ಮನವಿಯನ್ನು ಸಲ್ಲಿಸಿದರು. ಸೋಮವಾರಪೇಟೆ, ಮತ್ತು ಕುಶಾಲನಗರ ತಾಲ್ಲೂಕಿನ ಮೂರು ವಾಲ್ಮೀಕಿ ಶಾಲೆಗಳಲ್ಲಿ 18. ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.
ಮನವಿಗೆ ಸ್ಪಂದಿಸಿದ ಶಾಸಕರು ವಾಲ್ಮೀಕಿ ಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಚರ್ಚಿಸಿ , ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಒದಗಿಸುವ ಬರವಸೆಯನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ವಾಲ್ಮೀಕಿ ಶಾಲಾ ಶಿಕ್ಷಕರಾದ ಕಲಾವತಿ, ವಿದ್ಯಾ, ಪ್ರೀತು, ಪುಟ್ಟರಾಜು ಜಗದೀಶ್, ಮೊದಲಾದವರು ಹಾಜರಿದ್ದರು.
Back to top button
error: Content is protected !!