ಕುಶಾಲನಗರ, ಸೆ 22: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಸರಕಾರದ ಪರವಾಗಿ ನಿರ್ದೇಶಕರಾಗಿ ಚಿಕ್ಕತ್ತೂರು ಗ್ರಾಮದ ಪುರುಷೋತ್ತಮ ಅವರನ್ನು ನಾಮನಿರ್ದೇಶನಗೊಳಿಸಲಾಗಿದೆ.
ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣನವರ ಆದೇಶದಂತೆ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಸೂಚನೆಯಂತೆ ಸಹಕಾರ ಇಲಾಖೆಯ ನಿಯಮದ ಅಡಿಯಲ್ಲಿ ಪುರುಷೋತ್ತಮ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Back to top button
error: Content is protected !!