ಸಾಹಿತ್ಯ

ಕುಶಾಲನಗರ ತಾಲೂಕು ಕಸಾಪ ವತಿಯಿಂದ ಕಲಾಭವನದಲ್ಲಿ ಕಚೇರಿ ನಾಮಫಲಕ ಉದ್ಘಾಟನೆ

ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸಿ... ಡಿವೈಎಸ್ಪಿ ಗಂಗಾಧರಪ್ಪ ಕರೆ

ಕುಶಾಲನಗರ, ಆ 27: ಸದಾ ಒಂದಲ್ಲ ಒಂದು ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಕುಶಾಲನಗರ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಕರೆ ನೀಡಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪಟ್ಟಣದ ಕಲಾ ಭವನದಲ್ಲಿ ಬಾನುವಾರ ಕಚೇರಿಯ ನಾಮಫಲಕ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಮ್ಮನ ಸೇವೆಯನ್ನು ನಿತ್ಯ ಮಾಡಬೇಕು. ಸಾಹಿತ್ಯದಲ್ಲಿ ಹಲವು ವಿಭಾಗಗಳು ಇವೆ. ಕವನ ರಚನೆ, ಹಳೆಗನ್ನಡ ಓದುವ, ಬರೆಯುವ, ಅರ್ಥೈಸುವ ಕೆಲಸವನ್ನು ಮಾಡಿದರೇ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬರಬೇಕು. ಇಲಾಖೆ ವತಿಯಿಂದ ಪರಿಷತ್ತಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಸಂಘಟನೆಗೆ ನೆಲೆಯಿದ್ದಾಗ ಉತ್ತಮ ಶಕ್ತಿ ಬರುತ್ತೆ. ಸದಸ್ಯರೆಲ್ಲರೂ ಸೇರಿ ತಂಡವಾಗಿ ಕೆಲಸ ಮಾಡಬೇಕೆಂದು ಕಸಾಪದ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಕಚೇರಿಯಲ್ಲಿ ದೀಪ ಬೆಳಗಿಸಿ ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಕಚೇರಿಯ ಟೇಪ್ ಕತ್ತರಿಸಿ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ನಿರಂತರವಾಗಿ ಸಾಹಿತ್ಯ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸದಾ ಸಕ್ರಿಯವಾಗಿ ಇರಲು ಕರೆ ಕೊಟ್ಟರು. ಪ್ರತಿಯೊಬ್ಬ ಸದಸ್ಯರನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಮಾತನಾಡಿ, ಇಲಾಖೆ ವತಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ಅಗತ್ಯ ಬೆಂಬಲ ನೀಡಲಾಗುವುದು ಎಂದರು.

ಕುಶಾಲನಗರ ತಾಲೂಕು ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷ ಕೆ.ಎಸ್.ನಾಗೇಶ್, ಗೌರವ ಕಾರ್ಯದರ್ಶಿಗಳಾದ ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಸಂಘಟನಾ ಕಾರ್ಯದರ್ಶಿಗಳಾದ ಸೂದನ ರತ್ನಾವತಿ, ದೇವಿಪ್ರಸಾದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್, ಪ್ಯಾನ್ಸಿ ಮುತ್ತಣ್ಣ, ಬಿ.ಬಿ.ಸಾವಿತ್ರಿ, ಫಿಲೋಮಿನಾ ಇತರರು ಉಪಸ್ಥಿತರಿದ್ದರು.

 

 

Related Articles

Leave a Reply

Your email address will not be published. Required fields are marked *

Back to top button
error: Content is protected !!