ಕುಶಾಲನಗರ, ಆ 05: ಕುಶಾಲನಗರದ ಎಪಿಸಿಎಂಎಸ್ ನ ತೆರವಾಗಿದ್ದ ಒಂದು ನಿರ್ದೇಶಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಿ.ಎನ್.ಲೋಕೇಶ್ ಜಯಗಳಿಸಿದ್ದಾರೆ.
ಹೆಬ್ಬಾಲೆ ಬ್ಲಾಕ್ ಬಿಸಿಎಂ ಬಿ ಗೆ ಮೀಸಲಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸಿ.ಎನ್.ಲೋಕೇಶ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂ.ಜಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿಯ ಸಿ.ಎನ್.ಲೋಕೇಶ್ ಅವರಿಗೆ 342 ಮತ, ಕಾಂಗ್ರೆಸ್ ನ ಕುಮಾರಸ್ವಾಮಿ ಅವರಿಗೆ 282 ಮತಗಳು ಲಭಿಸಿದವು. 60 ಮತಗಳ ಅಂತರದಿಂದ ಲೋಕೇಶ್ ಗೆಲುವು ಸಾಧಿಸಿದರು.
ಈ ಸಂದರ್ಭ ನೆರದಿದ್ದ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೇಶ್, ಕ್ಷೇತ್ರದ ಸದಸ್ಯರು, ರೈತರಿಗೆ ಸಹಕಾರ ಸಂಘದಿಂದ ದೊರಕುವ ಎಲ್ಲಾ ರೀತಿಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಎಚ್.ಬಿ.ಚಂದ್ರಪ್ಪ ಮಾತನಾಡಿ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಉಪಾಧ್ಯಕ್ಷ ದೊಡ್ಡಯ್ಯ, ನಿರ್ದೇಶಕ ನಾಗೇಶ್, ಬಿಜೆಪಿ ಪ್ರಮುಖರಾದ ಕೃಷ್ಣ, ಟಿ.ಸಿ.ಶಿವಕುಮಾರ್, ಟಿ.ಎಂ.ವಿಕ್ರಂ, ವಿ.ಟಿ.ದೇವರಾಜ್, ಟಿ.ಎಚ್.ಸೋಮಾಚಾರಿ, ರವಿ, ಎಂ.ವಿ.ನಾರಾಯಣ್, ಕೆ.ಬಿ.ದೇವರಾಜ್, ಪಿ.ಎಲ್.ಮಹೇಶ್, ಶಿವಪ್ಪ ಅಳುವಾರ, ತೀರ್ಥಾನಂದ, ಸೋಮಣ್ಣ ಮತ್ತಿತರರು ಇದ್ದರು.
Back to top button
error: Content is protected !!