ಸಭೆ

ಎ ಪಿ ಸಿ ಎಂ ಎಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಭೆ

ಕುಶಾಲನಗರ, ಜು 28: ಎ ಪಿ ಸಿ ಎಂ ಎಸ್ ನ ನಿರ್ದೇಶಕರಾಗಿದ್ದ ಟಿ.ಬಿ ಜಗದೀಶ್ ರವರ ರಾಜೀನಾಮೆಯಿಂದ ತೆರವಾಗಿದ್ದ

ಹೆಬ್ಬಾಲೆ ಕ್ಷೇತ್ರಕ್ಕೆ ನಿರ್ದೇಶಕರ ಸ್ಥಾನಕ್ಕೆ ( ಮೀಸಲು BCMB ) ಜರುಗಲಿರುವ ಉಪಚುನಾವಣೆಯ ಅಭ್ಯರ್ಥಿಯ ಆಯ್ಕೆ ಹಾಗೂ ಪೂರ್ವಭಾವಿ ಸಭೆಯನ್ನು ಕುಶಾಲನಗರ ಕಾಂಗ್ರೆಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಎಲ್ಲರ ಒಮ್ಮತ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಎಂ. ಜಿ ಮಣಜೂರು ಇವರನ್ನು ಆಯ್ಕೆ ಮಾಡಲಾಯಿತು.

ಈ ಚುನಾವಣೆಯು ದಿನಾಂಕ 06-08-23 ರ ಭಾನುವಾರದಂದು ನಡೆಯಲಿದ್ದು ಅದರ ಅಭ್ಯರ್ಥಿ ಆಯ್ಕೆ ಹಾಗೂ ಪೂರ್ವಭಾವಿ ಸಭೆಯನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ ಪಿ ಶಶಿಧರ್ ರವರ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ಶಿರಂಗಾಲ, ತೊರೆನೂರು ಹೆಬ್ಬಾಲೆ, ಕೂಡಿಗೆ ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!