ಕುಶಾಲನಗರ, ಜೂ 20:
ನಂಜರಾಯಪಟ್ಟಣ ಗ್ರಾಪಂನ 2023-24ನೇ ಸಾಲಿನ ಪಂಚಾಯ್ತಿ ನಿಧಿ ರೂ 20 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಗ್ರಾಪಂ ವ್ಯಾಪ್ತಿಯ ನಂಜರಾಯಪಟ್ಟಣ ಮತ್ತು ರಂಗಸಮುದ್ರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದ ಆಡಳಿತ ಮಂಡಳಿ ಪದಾಧಿಕಾರಿಗಳು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ದುಬಾರೆ ಪ್ರವಾಸಿ ತಾಣದಲ್ಲಿ ಪಾರ್ಕಿಂಗ್ ಗೆ ಅನುಕೂಲವಾಗುವಂತೆ 3 ಲಕ್ಷ ವೆಚ್ಚದಲ್ಲಿ ಸೋಲಿಂಗ್, ಗ್ರಾಪಂ ಆವರಣದಲ್ಲಿ 1.50 ಲಕ್ಷದಲ್ಲಿ ವಾಹನ ಪಾರ್ಕಿಂಗ್ ಶೆಡ್, 1 ಲಕ್ಷದಲ್ಲಿ ಮಸೀದಿ ಆವರಣ ಗೋಡೆ ನಿರ್ಮಾಣ, 1.30 ಲಕ್ಷದಲ್ಲಿ ಗುಳಿಗ ದೇವಾಲಯ ಬಳಿ ಕೊಠಡಿಗೆ ಮೇಲ್ಚಾವಣಿ ಅಳವಡಿಕೆ, ಅಯ್ಯಂಡ್ರ ಬೋಪಯ್ಯ ಜಮೀನು ದಾರಿಯಲ್ಲಿ 80 ಸಾವಿರದಲ್ಲಿ ಕಾಲು ಸೇತುವೆ ನಿರ್ಮಾಣ, ವಿಶೇಷ ಚೇತನರಾದ ಪಿ.ಸುಜಿತ್, ವಿನೋದ್ ಅವರ ಮನೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆ ನಿರ್ಮಾಣ, 2 ಲಕ್ಷದಲ್ಲಿ ಪಟೇಲ್ ಮೋಹನ್, ಶಿವಣ್ಣ, ಕಾಳಿಂಗ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸೇರಿದಂತೆ ಚಿನ್ನೂರು, ದಾಸವಾಳ, ದುಬಾರೆ, ಗುಳಿಗ ದೇವಾಲಯ ಹಾಗೂ ಮಸೀದಿ ವ್ಯಾಪ್ತಿಯ ರಸ್ತೆಗಳು ಒಳಗೊಂಡಂತೆ ವಿವಿಧೆಡೆ ಸಂಪರ್ಕ ರಸ್ತೆಗಳ ಅಭಿವೃದ್ದಿಗೆ ಕಾಮಗಾರಿ ಕೈಗೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಪ್ರಸಕ್ತ ಆಡಳಿತ ಮಂಡಳಿ ಎರಡೂವರೆ ವರ್ಷದಲ್ಲಿ 85 ರಿಂದ 90 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿದೆ. ಸಧ್ಯದಲ್ಲಿ ರಂಗಸಮುದ್ರ ಬ್ಲಾಕ್ ನಲ್ಲಿ ಕೂಡ ರೂ 13 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಜಾತಿ, ಧರ್ಮ ರಹಿತವಾದ ಪ್ರಾಮಾಣಿಕ ಸೇವೆ ಒದಗಿಸುವಲ್ಲಿ ನಮ್ಮ ಆಡಳಿತ ಮಂಡಳಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಜಾಜಿ ತಮ್ಮಯ್ಯ, ಕುಸುಮ, ಗಿರಿಜಮ್ಮ, ಪಿಡಿಒ ಕಲ್ಪ, ಕಾರ್ಯದರ್ಶಿ ಶೇಷಗಿರಿ, ಗುತ್ತಿಗೆದಾರ ಅಹಮ್ಮದ್ ಸೇರಿದಂತೆ ಆಯಾ ವ್ಯಾಪ್ತಿಯ ಗ್ರಾಮಸ್ಥರು ಇದ್ದರು.
Back to top button
error: Content is protected !!