ಕುಶಾಲನಗರ, ಏ 24 : ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಕೆ. ಬ್ರಿಜೇಶ್ ನಿರಂಜನ್ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾನೆ.
ಕನ್ನಡದಲ್ಲಿ 100 ಕ್ಕೆ 98, ಇಂಗ್ಲೀಷ್ 97, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 97, ಗಣಿತ 100, ಜೀವಶಾಸ್ತ್ರದಲ್ಲಿ 100 ಅಂಕಗಳು ಸೇರಿ 600 ಅಂಕಗಳಿಗೆ 591 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗ ಮತ್ತು ರಾಜ್ಯಕ್ಕೆ ಆರನೇ ಸ್ಥಾನದಲ್ಲಿದ್ದಾನೆ.
ನೀಟ್ ಕೋಚಿಂಗ್ ತೆಗೆದುಕೊಂಡಿರುವ ಈತ ಪಿಯು ನಂತರ ಮೆಡಿಕಲ್ ವ್ಯಾಸಾಂಗದತ್ತ ಒಲವು ಹೊಂದಿರುವುದಾಗಿ ಹೇಳುತ್ತಾನೆ.
ಈತ ಕುಶಾಲನಗರದ ಕುದುಪಜೆ ನಿರಂಜನ್ ಹಾಗು ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾದಿಯಾಗಿರುವ ಸುಮತಿ ದಂಪತಿಗಳ ಪುತ್ರ.
ಜಿಲ್ಲೆಗೆ ಅತ್ಯುತ್ತಮ ಸಾಧನೆ ತೋರಿರುವ ವಿದ್ಯಾರ್ಥಿ ಬ್ರಿಜೇಶ್ ನಿರಂಜನ್ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಪಿಯು ವಿಭಾಗದ ಪ್ರಾಂಶುಪಾಲೆ ಕ್ಲಾರಾ ರೇಶ್ಮಾ, ಮಹಾತ್ಮ ಗಾಂಧಿ ಪದವಿ ವಿಭಾಗದ ಪ್ರಾಂಶುಪಾಲೆ ಲಿಖಿತ, ಮಂಗಳೂರಿನ ರಸಾಯನ ಶಾಸ್ತ್ರದ ಪ್ರೊ. ಡಾ.ರಾಕೇಶ್, ಕಾಲೇಜು ಟ್ರಸ್ಟಿ ನಂಜಪ್ಪ ಹಾಗು ಉಪನ್ಯಾಸಕರಿದ್ದರು.
Back to top button
error: Content is protected !!