ಕುಶಾಲನಗರ, ಏ 10: ನಾಡಿನ ಸಂಸ್ಕೃತಿ ಮತ್ತು ದೇಶದ ಸಮಗ್ರತೆಯ ಬಗ್ಗೆ ಕಾಳಜಿ ಹೊಂದಿರುವ, ಸಮಾಜ ಘಾತುಕ ಶಕ್ತಿಗಳ ವಿರುದ್ದ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಅವರಿಗೆ ಈ ಹಿಂದೆ ನೀಡಿದಂತೆ ಅಂಗರಕ್ಷಕ ಭದ್ರತೆ ಒದಗಿಸುವಂತೆ ಕುಶಾಲನಗರದ ಕೋಟಿ ಚನ್ನಯ್ಯ ಬಿಲ್ಲವ ಸಮಾಜ ಆಗ್ರಹಿಸಿದೆ.
ನಿರಂತರ ಜೀವ ಬೆದರಿಕೆ ಇರುವ ಹಿನ್ನಲೆಯಲ್ಲಿ, ಅವರು ವಾಸವಿರುವ ಮಂಗಳೂರು ಪ್ರದೇಶ ಅತಿ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನಲೆಯಲ್ಲಿ ಸತ್ಯಜಿತ್ ಅವರಿಗೆ ಸೂಜ್ತಯ ಭದ್ರತೆ ಒದಗಿಸುವಂತೆ ಕುಶಾಲನಗರ ಕಂದಾಯ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಕುಶಾಲನಗರದ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ, ಉಪಾಧ್ಯಕ್ಷೆ ಕುಸುಮಾ, ಕಾರ್ಯದರ್ಶಿ ಅಣ್ಣು ಪೂಜಾರಿ, ಖಜಾಂಚಿ ಆಶಾ, ಪ್ರಮುಖರಾದ ಲೀಲಾ ರಮೇಶ್, ಶೋಭ ಅಚ್ಚುತ್ತ, ಗಂಗಮ್ಮ ,ರಮೇಶ್,ಅಣ್ಣಪ್ಪ, ಕಿರಣ್ ಇದ್ದರು.
Back to top button
error: Content is protected !!