ಕುಶಾಲನಗರ, ಮಾ 07: ಶೇ.೨೫ ರ ಹಣದಲ್ಲಿ ಕೂಡುಮಂಗಳೂರು ಗ್ರಾ.ಪಂ ನ ನವಗ್ರಾಮದ ಫಲಾನುಭವಿಗೆ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಹೊಲಿಗೆ ಯಂತ್ರ ವಿತರಿಸಿದರು.
೨೦೨೨-೨೩ ಸಾಲಿನಲ್ಲಿ ಶೇ.೨೫ ರ ಹಣದಲ್ಲಿ ಕೂಡುಮಂಗಳೂರು ಗ್ರಾ.ಪಂ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತಿದ್ದು, ನವಗ್ರಾಮದ ದೀಪ ಹರೀಶ್ ಅವರಿಗೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹೊಲಿಗೆ ಯಂತ್ರ ವಿತರಿಸಿದರು.
ನಂತರ ಮಾತನಾಡಿದ ಕೆ.ಬಿ.ಶಂಶುದ್ಧೀನ್ ಅವರು, ಪರಿಶಿಷ್ಟ ಜಾತಿ ಮುತ್ತ ಪಂಗಡದವರಿಗೆ ಫಲಾನುಭವಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ. ಅನಾರೋಗ್ಯ ಉಂಟಾದಲ್ಲಿ ಹಾಗೂ ಪ.ಪಂ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಆದ್ದರಿಂದ ಅರ್ಹರು ಪಂಚಾಯಿತಿಗೆ ಅರ್ಜಿ ನೀಡಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯೆ ಶಿವಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಸಿಬ್ಬಂದಿ ಪವಿತ್ರ ಇದ್ದರು.
Back to top button
error: Content is protected !!