ಕುಶಾಲನಗರ, ಡಿ 13:ಕೊಡಗು ಜಿಲ್ಲೆಗೆ ಎನ್. ಡಿ.ಆರ್.ಎಫ್ ನಿಂದ ರೂ 113 ಕೋಟಿ ರೂ ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆಗೊಂಡಿದ್ದು ಇದಕ್ಕಾಗಿ ಶ್ರಮಿಸಿದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅವರಿಗೆ ಬಿಜೆಪಿ ಯುವಮೋರ್ಚಾ ಸೋಮವಾರಪೇಟೆ ಮಂಡಲ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಮಂಡಲ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಪ್ರಧಾನಕಾರ್ಯದರ್ಶಿಗಳಾದ ಮೋಹಿತ್ ತಿಮ್ಮಯ್ಯ, ಪದ್ಮನಾಭ್ ಅವರು, ಇತಿಹಾಸದಲ್ಲಿ ಪ್ರಥಮ ಎಂಬಂತೆ ಜಿಲ್ಲೆಗೆ ಅತ್ಯಧಿಕ ಪರಿಹಾರ ಮೊತ್ತ ಈ ಬಾರಿ ಬಿಡುಗಡೆಯಾಗಿದೆ. 39597 ಮಂದಿ ಫಲಾನುಭವಿ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆಯಾಗಲಿದೆ. ಈ ಹಿಂದೆ ಕೂಡ ಶಾಸಕರ ಪ್ರಯತ್ನದಿಂದ 100 ಕೋಟಿ ಅನುದಾನ ಲಭಿಸಿತ್ತು. ಕೊಡಗು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಶಾಸಕರು ತಮ್ಮ ಜವಾಬ್ದಾರಿ ತೋರುತ್ತಿದ್ದಾರೆ. ಮುಂದೆಯೂ ಕೂಡ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ರೈತರ ಪರವಾಗಿ ಶಾಸಕ ಅಪ್ಪಚ್ಚುರಂಜನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮೂಲಕ ಧನ್ಯವಾದ ಸಲ್ಲಿಸಿದರು.
Back to top button
error: Content is protected !!