ಕುಶಾಲನಗರ, ಡಿ 14: ಕುಶಾಲನಗರ ಪುರಸಭೆಯಾಗಿ ರಚನೆಯಾಗಿದೆ. ಬುಧವಾರ ಪುರಸಭೆ ಸಾಮಾನ್ಯ ಸಭೆ ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಮುಳ್ಳುಸೋಗೆ ಗ್ರಾಪಂ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಪುರಸಭೆ ಘೋಷಣೆಯಾಗಿ ವಾರ ಕಳೆದಿಲ್ಲ. ಆಗಬೇಕಾದ ಕಾರ್ಯಗಳು ಬೇಕಾದಷ್ಟಿದೆ. ಅಷ್ಟರೊಳಗೆ ಪುರಸಭೆ ಹೆಸರಿನಲ್ಲಿ ಸಭೆ ನಡೆಸುತ್ತಿರುವ ಬಗ್ಗೆ ಗ್ರಾಪಂ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಪುರಸಭೆ ರಚನೆಯಾದ ಬಳಿಕ ಜನಸಾಮಾನ್ಯರು ಸೇರಿದಂತೆ ಜನಪ್ರತಿನಿಧಿಗಳಲ್ಲಿ ಗೊಂದಲಕ್ಕೆ ಸೂಕ್ತ ಉತ್ತರ ದೊರಕಿಲ್ಲ. ಕೂಡಲೆ ಜಿಲ್ಲಾಡಳಿತ ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಭೆ ಕರೆದು ಗೊಂದಲ ಸ್ಪಷ್ಟವಾಗಿ ಪರಿಹರಿಸುವಂತಾಗಬೇಕು.
Back to top button
error: Content is protected !!