ಕುಶಾಲನಗರ, ನ 29: ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 54ನೇ ವಾರ್ಷಿಕ ಮಹಾ ರಥೋತ್ಸವವು ಶ್ರಧ್ಧಾಭಕ್ತಿಯಿಂದ ಮಂಗಳವಾರ ನಡೆಯಿತು.
ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿದಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ಮಹಾಪೂಜೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದು ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಮೈಸೂರಿನ ಯಜ್ಞೇಶ್ವರ್ ಐತಾಳ್ ತಂಡ ಮತ್ತು ದೇವಾಲಯದ ಪ್ರಮುಖ ಅರ್ಚಕ ನವೀನ ಭಟ್ ತಂಡದವರು ಪೂಜಾ ವಿಧಿ ನೆರವೇರಿಸಿದರು.
ಮಧ್ಯಾಹ್ನ 12 ಗಂಟೆಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಧಿಗ್ಬಲಿ, ರಥಬಲಿ, ರಥಪೂಜೆ ನಡೆದ ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹವನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥೋತ್ಸವವು ಹೊರಡುವ ಮುನ್ನ ಅಯ್ಯಪ್ಪ ವತ್ರದಾರಿಗಳು ಅಯ್ಯಪ್ಪ ಸ್ಮರಣೆಯೊಂದಿಗೆ ದೇವರ ಕೀರ್ತನೆಗಳನ್ನು ಹಾಡಿ ಬೃಹತ್ ಪ್ರಮಾಣದ ಕರ್ಪೂರ ಗಳನ್ನು ಹಚ್ಚಿ ಭಕ್ತಿ ಮೆರೆದರು. ರಥದ ಮೆರವಣಿಗೆ ಶ್ರೀ ಸ್ವಾಮಿ ಸನ್ನಿಧಿಯಿಂದ ಸಂಪ್ರದಾಯದಂತೆ ಕೂಡಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕೂಡುಮಂಗಳೂರು ಗ್ರಾಮದವರೆಗೆ ಸಾಗಿತು. ರಥವು ತೆರಳುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಸ್ವಾಮಿ ರಥಕ್ಕೆ ಹಣ್ಣು ಕಾಯಿ ಸಲ್ಲಿಸಿ ಪೂಜೆ ಮಾಡುವುದರ ಜೊತೆಗೆ ರಥಕ್ಕೆ ಬಾಳೆ ಹಣ್ಣು ಮತ್ತು ಜವನಗಳನ್ನು ಎಸೆದು ಭಕ್ತಿ ಮೆರೆದರು.
ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ ಸಮಿತಿ ಮತ್ತು ಭಕ್ತ ಮಂಡಳಿ ವತಿಯಿಂದ ಸುಪ್ರಸಿದ್ಧ ಮಂಗಳೂರಿನ ಶಾರದ ಪುಲಿ ತಂಡದವರಿಂದ ಚಂಡೆವಾದ್ಯ, ಹುಲಿವೇಷ, ಕೀಲುಕುಣಿತ, ಗೊಂಬೆ ಕುಣಿತ ವಿಶೇಷ ಆಕರ್ಷಣೆಯಾಗಿತ್ತು.
ರಥವು ಸನ್ನಿಧಿಯಿಂದ ಸಾಗಿದ ನಂತರ ರಥೋತ್ಸವಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ದೇವಾಲಯ ಸಮಿತಿಯ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ನಂತರ ಸಂಜೆ 4 ಗಂಟೆಗೆ ಕೂಡುಮಂಗಳೂರು ಗ್ರಾಮದಿಂದ ಸ್ವ ಸ್ಥಳಕ್ಕೆ ರಥವನ್ನು ಭಕ್ತರು ಎಳೆದುಕೊಂಡು ಬಂದರು
ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಸೇರಿದಂತೆ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದರು.
ಸಂಜೆ ಕೂಡಿಗೆ ಆಸ್ಪತ್ರೆ ಸಮೀಪದ ಮೈದಾನದಲ್ಲಿ ಬಣ್ಣ ಬಣ್ಣದ ಆಕರ್ಷಕ ಮದ್ದುಗಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸಳೆಯಿತು.
ರಥೋತ್ಸವದ ಅಂಗವಾಗಿ ಕೂಡಿಗೆ .
ಈ ಸಂದರ್ಭದಲ್ಲಿ ಟಾಟಾ ಕುಶಾಲನಗರ ಕಾಫಿ ಸಂಸ್ಥೆ ಉಪ ವ್ಯವಸ್ಥಾಪಕ ನಿರ್ದೇಶಕ ರೋಷನ್ ಸೋಮಯ್ಯ, ದೇವಾಲಯ ಸಮಿತಿಯ ಗೌರವ ಕಾರ್ಯದರ್ಶಿ ಮಂದಣ್ಣ, ಕಾರ್ಯದರ್ಶಿ ಶಮಂತ್ ರೈ, ಪೊನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಕೂಡುಮಂಗಳೂರು ಗ್ರಾಮ ಪ್ರಮುಖರು, ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಉತ್ಸವ ಭಕ್ತ ಮಂಡಳಿಯವರು ಹಾಜರಿದ್ದರು.
ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರ್ ನೇತ್ರತ್ವದಲ್ಲಿ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
Back to top button
error: Content is protected !!