ಸಭೆ

ದೇವಾಲಯಗಳಲ್ಲಿ ಕಳ್ಳತನ: ದೇವಾಲಯಗಳ ಸಮಿತಿ ಪ್ರಮುಖರು-ಪೊಲೀಸ್ ಅಧಿಕಾರಿಗಳ ಸಭೆ

ಕುಶಾಲನಗರ, ನ 03:
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಆರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಿವುಧ ದೇವಾಲಯಗಳ ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು.
ಡಿ.ವೈ.ಎಸ್.ಪಿ ಗಂಗಾಧರಪ್ಪ ಅವರ ಅಧ್ಯಕ್ಷತೆಯಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ‌ ನಡೆದ ಸಭೆಯಲ್ಲಿ ದೇವಾಲಯಗಳ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಇತ್ತೀಚಿನ ದಿನಗಳಲ್ಲಿ ದೇವಾಲಯಗಳಲ್ಲಿ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ದೇವಾಲಯ ಸಮಿತಿಯರು ಮುಂಜಾಗ್ರತವಾಗಿ ಕೈಗೊಳ್ಳಬಹುದಾದ ರಕ್ಷಣಾ ಕ್ರಮಗಳ ಬಗ್ಗೆ ಡಿವೈಎಸ್ಪಿ ಸಭೆಯಲ್ಲಿ ಮಾಹಿತಿ ನೀಡಿದರು.
ದೇವಾಲಯದ ಆವರಣದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳ ಅಳವಡಿಕೆ, ವಾಚ್ ಮ್ಯಾನ್ ನೇಮಕಗೊಳಿಸುವುದು ಜೊತೆಗೆ ಹುಂಡಿಯ ಹಣ ಮತ್ತು ದೇವರಿಗೆ ಧರಿಸುವ ಚಿನ್ನಭರಣವನ್ನು ತೆಗೆದು ಬ್ಯಾಂಕ್ ಲಾಕರ್ ನಲ್ಲಿ‌ ಇಡಲು ಸಲಹೆ ನೀಡಲಾಯಿತು.
ಕುಶಾಲನಗರ ಪೋಲೀಸ್ ವೃತ್ತ ನಿರೀಕ್ಷಕ ಮಹೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗುಡ್ಡೆಹೊಸೂರು, ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ್ತು ಉಪ ಗ್ರಾಮಗಳ ದೇವಾಲಯ ಸಮಿತಿಯ ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!