ಪ್ರಕಟಣೆ

ಅ.21 ರಂದು ಕುಶಾಲನಗರ ನಾಡು ಕಛೇರಿಯಲ್ಲಿ ಪೌತಿ ಖಾತೆಯ ಆಂದೋಲನ

ದೃಡೀಕೃತ ದಾಖಲೆಗಳೊಂದಿಗೆ ಆಂದೋಲನದ ಸದುಪಯೋಗ ಪಡೆದುಕೊಳ್ಳಲು ಉಪ ತಹಶೀಲ್ದಾರ್ ಕೆ.ಜೆ.ಮಧುಸೂದನ್ ಕೋರಿಕೆ

ಕುಶಾಲನಗರ: ಅ 17: ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಕುಶಾಲನಗರ ತಹಶೀಲ್ದಾರ್ ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ 21 ರಂದು ಬೆಳಗ್ಗೆ 11:00 ಗಂಟೆಯಿಂದ ಒಂದು ಗಂಟೆಯವರೆಗೆ ಕುಶಾಲನಗರ ಹೋಬಳಿ ನಾಡು ಕಚೇರಿಯಲ್ಲಿ ಕುಶಾಲನಗರ ಹೋಬಳಿ ಎಲ್ಲಾ ಗ್ರಾಮಗಳ ಜನತೆಗೆ ಪೌತಿ ಖಾತೆ ಬದಲಾವಣೆ ,ಪಟ್ಟೆ ದಾರಿಕೆ ಬದಲಾವಣೆ ಹಾಗೂ ತೊರೆನೂರು ವೃತ್ತದ ದೊಡ್ಡ ಅಳುವಾರ, ಚಿಕ್ಕ ಅಳುವಾರ ಗ್ರಾಮಗಳ  ಪಹಣಿಯಲ್ಲಿ ತಿದ್ದುಪಡಿ ಸಂಬಂಧ ಆಂದೋಲನವನ್ನು ಏರ್ಪಡಿಸಲಾಗಿದೆ.
ಅಗತ್ಯ ದಾಖಲಾತಿಗಳಾದ ಮೂಲ ಜಮಾ ಬಂದಿ, ಪಹಣಿ, ಆಕಾರ್ ಬಂದ್, ವಂಶವೃಕ್ಷ, ಮರಣ ದೃಢೀಕರಣ ಪತ್ರ ನೈಜ ದೃಡೀಕೃತ ದಾಖಲೆಗಳೊಂದಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಉಪ ತಹಶೀಲ್ದಾರ್ ಕೆ.ಜೆ.ಮಧುಸೂದನ್ ರವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!