ಕುಶಾಲನಗರ, ಸೆ ೧೦: ಕುಶಾಲನಗರ ಸಮೀಪದ ಲಾಮಾ ಕ್ಯಾಂಪ್ ನಲ್ಲಿರುವ ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್, ಮೈಸೂರು ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಕಾರ್ಯಕ್ರಮವು ಸೆರಜೆ ಮೊನಾಸ್ಟ್ರಿಕ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೆನ್ ಗೆಷೆ ತ್ಸೆತಾರ್ ಅವರು, ಇಂದು ಸೆರಜೆ ಮೊನಾಸ್ಟ್ರಿಕ್ ಇನ್ಸ್ಟಿಟ್ಯೂಟ್,ಮೈಸೂರು ಹಾಗೂ ತುಮಕೂರು ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚು ಶಿಕ್ಷಣವನ್ನು ಕಲಿಯಲು ಅನುಕೂಲವಾಗಲಿದೆ ಎಂದರು.
ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಆರ್.ಶಿವಪ್ಪ ಮಾತನಾಡಿ, ಬುದ್ಧರವರಿಗೆ ವಿಶ್ವಾದ್ಯಂತ ಅನುಯಾಯಿಗಳಿದ್ದಾರೆ. ಪ್ರಾಚೀನ ಶಿಕ್ಷಣದ ಬಗ್ಗೆ ಇಂದಿನ ಪೀಳಿಗೆ ತಿಳಿದುಕೊಳ್ಳಬೇಕಾಗಿದೆ. ನಮ್ಮ ವಿಶ್ವವಿದ್ಯಾಲಯಲ್ಲಿ ಪ್ರಾಚೀನ ಶಿಕ್ಷಣ ಹಾಗೂ ಟಿಬೆಟಿಯನ್ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದೇವೆ. ಇದು ಇಲ್ಲಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಎಮ್.ವೆಂಕಟೇಶ್ವರಲು ಮಾತನಾಡಿ, ನಮ್ಮ ವಿಶ್ವ ವಿದ್ಯಾನಿಲಯವು ೧೮ ವರ್ಷಗಳನ್ನು ಪೂರ್ಣಗೊಳಿಸಿದೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಎರಡು ಭಾಷೆಗಳಲ್ಲಿ ಅನುವಾದಿಸಿದ ಪುಸ್ತಕಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ನಂತರ ವೆನ್ ಗೆಷೆ ತ್ಸೆತಾರ್ ಅವರು ಮೈಸೂರು ಹಾಗೂ ತುಮಕೂರು ವಿಶ್ವವಿದ್ಯಾಲಯದ ನಡುವೆ ಒಪ್ಪಂದ ಪತ್ರಕ್ಕೆ ಸಹಿಹಾಕಿದರು. ಕಾರ್ಯಕ್ರಮದಲ್ಲಿ ಕುಶಾಲನಗರದ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಇತರ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಇಗ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾದೇಶಿಕ ನಿರ್ದೇಶಕರಾದ ಹೇಮಾ ಮಾಲಿನಿ, ಸೆರಜೇ ಮೊನಾಸ್ಟ್ರಿಕ್ ನ ಪ್ರಮುಖರು ಇದ್ದರು.
Back to top button
error: Content is protected !!