ಕುಶಾಲನಗರ, ಆ 31:
ಕೂಡಿಗೆ ಸಮೀಪದ ದೊಡ್ಡತ್ತೂರು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ 31ನೇ ವರ್ಷದ ಅದ್ಧೂರಿ ಗೌರಿ ಗಣೇಶೋತ್ಸವವನ್ನು ಬುಧವಾರ ಆಚರಿಸಲಾಯಿತು ಹಾಗೂ ಸ್ಥಳೀಯ ಯುವಕರಿಗೆ ಆಟೋಟ ಕಾರ್ಯಕ್ರಮಗಳನ್ನು ಹಾಗೂ ಸಣ್ಣ ಮಕ್ಕಳಿಗೂ ವಿವಿಧ ಕಾರ್ಯಕ್ರಮಗಳನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಬಂದಂತಹ ಭಕ್ತಾಧಿಗಳಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು ಹಾಗೂ ದೊಡ್ಡತ್ತೂರು ವ್ಯಾಪ್ತಿಯ ಪ್ರತಿ ಮನೆಗಳ ಮುಂಭಾಗ ತಳಿರು ತೋರಣಗಳಿಂದ ಶೃಂಗರಿಸಿ ಗೌರಿ ಗಣೇಶೋತ್ಸವ ಹಬ್ಬದ ಮೆರುಗು ನೀಡಿತ್ತು .ಆದರೆ ಗ್ರಾಮದಲ್ಲಿ ಯಾವುದೇ ರೀತಿಯ ತೊಂದರೆ ಆಗದ ಹಾಗೆ ಮತ್ತು ಸರ್ಕಾರದ ಕೆಲವು ನಿಯಮದಂತೆ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಲ್ಲರೂ ಕೂಡ ಸರ್ಕಾರದ ನಿಯಮವನ್ನು ಅನುಸರಿಸಿ ಈ ಯಾವುದೇ ಜಾತಿ ಮತ ಭೇದ ಭಾವ ಇಲ್ಲದೆ ನಮ್ಮ ದೊಡ್ಡತುರು ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ದೊಡ್ಡತೂರು ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಗೂ ಎಲ್ಲಾ ಪದಾಧಿಕಾರಿಗಳು ಇದೇ ಸಂದರ್ಭ ತಿಳಿಸಿದರು.
Back to top button
error: Content is protected !!