ಕುಶಾಲನಗರ, ಆ 25: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಮಹಾಸಭೆ ಆ.28 ರಂದು ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ತಿಳಿಸಿದರು.
ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಪ್ರಾರಂಭದಲ್ಲಿ 762 ಸದಸ್ಯರನ್ನು ಒಳಗೊಂಡಿತ್ತು. ಪ್ರಸಕ್ತ ಸಂಘ 861 ಎ ತರಗತಿ, 91 ಸಿ ತರಗತಿ ಸದಸ್ಯರನ್ನು ಒಳಗೊಂಡಿದೆ. ಕಾಲಕಾಲಕ್ಕೆ ಬಡ್ಡಿ ದರ ಪರಿಷ್ಕರಿಸಿ ಸದಸ್ಯರಿಗೆ ಕೈಗೆಟುಕುವ ದರದಲ್ಲಿ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗುತ್ತಿದೆ ಎಂದರು.
ಸಂಘದ ಪ್ರಸಕ್ತ ಸಾಲಿನಲ್ಲಿ 15, 57, 475 ರೂ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.14% ಡಿವಿಡೆಂಡ್ ವಿತರಿಸಲಾಗಿದೆ.
ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಕಛೇರಿಯನ್ನು ಉಚಿತವಾಗಿ ನೀಡಿರುವ ಕಾರಣ ಸಂಘಕ್ಕೆ ಆರ್ಥಿಕ ಹೊರೆ ತಪ್ಪಿದೆ. ಸಂಘದ ಸದಸ್ಯರು ಸಹಕಾರ ನೀಡಿದಲ್ಲಿ ಸ್ವಂತ ನಿವೇಶನ ಹಾಗೂ ಕಛೇರಿ ಕಟ್ಟಡ ಹೊಂದಲು ಸಾಧ್ಯವಾಗಲಿದೆ ಎಂದರು.
ಮಹಾಸಭೆಗೆ ಸರ್ವ ಸದಸ್ಯರು ತಪ್ಪದೆ ಹಾಜರಾಗಿ ಸಲಹೆ ಸೂಚನೆ ನೀಡುವಂತೆ ಅವರು ಕೋರಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಬಿ.ಜಗದೀಶ್, ನಿರ್ದೇಶಕರಾದ ಕೆ.ಪಿ.ರಾಜು, ಎಂ.ಡಿ.ರಮೇಶ್, ರೇಖಾ ಪ್ರಕಾಶ್, ಕಸ್ತೂರಿ ಮಹೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಿತಾ ಇದ್ದರು.
Back to top button
error: Content is protected !!