ಸಭೆ
ಕುಶಾಲನಗರ: ಬಲಮುರಿ ಮಹಿಳಾ ಸಂಘದ ಆಶ್ರಯದಲ್ಲಿ ವನ ಮಹೋತ್ಸವ
ಕುಶಾಲನಗರ, ಆ 24: ಕುಶಾಲನಗರ ಪಟ್ಟಣ ಪಂಚಾಯತಿ ನಾಲ್ಕನೇ ವಿಭಾಗದ ನೆಹರು ಬಡಾವಣೆಯಲ್ಲಿ ಇರುವ ಬಲಮುರಿ ಗಣಪತಿ ದೇವಾಲಯದ ಆವರಣದಲ್ಲಿ ಗಣಪತಿ ದೇವಾಲಯ ಆಡಳಿತ ಮಂಡಳಿ ಮತ್ತು ಬಲಮುರಿ ಮಹಿಳಾ ಸಂಘ ಸ್ಥಳೀಯ ನಿವಾಸಿಗಳು ಸೇರಿ ವಿವಿಧ ಗಿಡಗಳನ್ನು ನೆಟ್ಟರು.ಈ ಸಂದರ್ಭದಲ್ಲಿ ಗಣಪತಿ ದೇವಾಲಯ ಅಧ್ಯಕ್ಷರಾದ ರೇಣುಕುಮಾರ್ ಮಾತನಾಡಿ .ಕೊಡಗಿನಲ್ಲಿ ಮರಗಿಡಗಳ ನಾಶದಿಂದ .ಹವಾಮಾನ ಏರು ಪೇರು ಆಗುತ್ತಿದೆ .ಒಂದು ಕಾಲದಲ್ಲಿ ಕೊಡಗು ಎಲ್ಲಿ ನೋಡಿದರು ಹಸಿರು ಸಿರಿಯಿಂದ ಕಂಗೊಳಿಸುತ್ತಿದ್ದು .ಇಂದಿನ ಚಿತ್ರಣ ಬದಲಾಗಿದೆ ಕಾಂಕ್ರೀಟ್ ಕರಣ ಆಗಿದೆ.ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮ ಮುಂದಿನ ತಲೆಮಾರಿನವರು ಮರಗಿಡಗಳನ್ನು ಪುಸ್ತಕದಲ್ಲಿ ನೋಡುವ ಸ್ಥಿತಿ ತಲುಪಬಹುದು ಆದುದರಿಂದ ನಾವೆಲ್ಲರೂ ಸೇರಿ ಹಸಿರು ಕ್ರಾಂತಿಯಲ್ಲಿ ತೊಡಗಿಸಿಕೊಂಡು
ಗಿಡಗಳನ್ನು ನೇಡುವ ಕಾಯಕದಲ್ಲಿ ಕೈ ಜೋಡಿಸ ಬೇಕು ಎಂದರು.ಬಲಮುರಿ ಮಹಿಳಾ ವೇದಿಕೆಯ ಸದಸ್ಯೆ ಸರಸ್ವತಿ ಮಾತನಾಡಿ .ನಮ್ಮ ವಾರ್ಡ್ ನ ಬಹಳ ಭಾಗದಲ್ಲಿ ನಮ್ಮ ಸಂಘದ ವತಿಯಿಂದ ಗಿಡಗಳನ್ನು ಹಲವಾರು ವರ್ಷಗಳಿಂದ ನೆಡುತ್ತಿದ್ದು .ಇಂದು ಬಲಮುರಿ ದೇವಾಲಯದ ಆವರಣದಲ್ಲಿ ಹಣ್ಣಿನ ಗಿಡಗಳು ಮತ್ತು ಹೂವಿನ ಮತ್ತು ನೆರಳಿನ ಗಿಡಗಳನ್ನು ನೆಡುತ್ತಿರುವ ಬಗ್ಗೆ ತಿಳಿಸಿದರು .ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಬಲಮುರಿ ಮಹಿಳಾ ಸಂಘದ ಸದಸ್ಯರು. ಸ್ಥಳೀಯರು ಪಾಲ್ಗೊಂಡಿದ್ದರು.