ಕುಶಾಲನಗರ, ಆ 24: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಬಾಣವಾರ ಅರಣ್ಯ ಶಾಖೆ ವ್ಯಾಪ್ತಿಯ ಅಂದಾನಿಪುರ ಗ್ರಾಮದ ಪೈಸಾರಿ ಜಾಗದಲ್ಲಿ 03 ಶ್ರೀಗಂಧದ ಮರವನ್ನು ಕಡಿದು ತುಂಡುಗಳಾಗಿ ಹಾಗೂ ಕೊರಟುಗಳಾಗಿ ಪರಿವರ್ತಿಸಿದ ಒಟ್ಟು 25 ಕೆಜಿ ಶ್ರೀಗಂಧವನ್ನು ಬೈಕಿನಲ್ಲಿ ಸಾಗಾಟ ಮಾಡುವ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿಗಳು ಪತ್ತೆ ಹಚ್ಚಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು.
ಗೋಣಿಮರೂರು ಗ್ರಾಮದ ಜಿ.ಎಸ್.ನಾಗರಾಜ್, ರವಿ ಹಾಗೂ ಮಹೇಂದ್ರ ಬಂಧಿಯ ಆರೋಪಿಗಳು. ಕೃತ್ಯಕ್ಕೆ ಬಳಸಿದ್ದ ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಈ ಪೈಕಿ ಆರೋಪಿ ನಾಗರಾಜ್ ಪರಾರಿಯಾಗಿದ್ದಾನೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಎಚ್.ಎಂ.ರಾಕೇಶ್, ಅರಣ್ಯ ರಕ್ಷಕರಾದ ಪ್ರಸಾದ್, ವೀಕ್ಷಕರಾದ ಅಂಥೋಣಿ, ವಾಹನ ಚಾಲಕ ಸಂತೋಷ್ ಪಾಲ್ಗೊಂಡಿದ್ದರು.
Back to top button
error: Content is protected !!