ಆರೋಪ

ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ದೌರ್ಜನ್ಯ: ಹೆಚ್.ಶಿವರಾಮೇಗೌಡರ ಕರವೇ ಖಂಡನೆ

ಕುಶಾಲನಗರ, ಜ 17:ತಮಿಳುನಾಡಿನಲ್ಲಿ ಅಯ್ಯಪ್ಪವೃತಾದಾರಿ ಮೇಲೆ ತಮಿಳು ಪುಂಡನೊಬ್ಬ ನಡೆಸಿದ ದೌರ್ಜನ್ಯವನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಕರವೇ ಜಿಲ್ಲಾಧ್ಯಕ್ಷ ಡಾ. ಬಿ.ಎ.ದಿನೇಶ್ ಶೆಟ್ಟಿ, ಕನ್ನಡಿಗರ ಮೇಲಿನ ದೌರ್ಜನ್ಯ ಕೊನೆಗಾಣಬೇಕಿದೆ. ತಮಿಳುನಾಡು ಮೂಲಕ ತೆರಳುತ್ತಿದ್ದ ಕನ್ನಡಿಗರ ವಾಹನ ತಡೆದು ಕನ್ನಡ ಧ್ವಜಕ್ಕೆ ಅಪಮಾನ ಮಾಡಿ ತಮಿಳು‌ ಮಾತಾಡುವಂತೆ ಒತ್ತಾಯಿಸಿ ಅಯ್ಯಪ್ಪಸ್ವಾಮಿ ಮಾಲಾಧಾರಿ ಮೇಲೆ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ ಅಪರಾಧ. ಇಂತಹ ಕೆಲವು ಪುಂಡರಿಂದ ಕರ್ನಾಟಕದಲ್ಲಿ ನೆಲೆಸಿರುವ ತಮಿಳಿಗರು ಕನ್ನಡಿಗರ ನಡುವಿನ‌ ಬಾಂಧವ್ಯ ಹದಗೆಡುವಂತಾಗುತ್ತದೆ. ತಪಿತಸ್ಥನ ವಿರುದ್ದ ಕ್ರಮಕ್ಕೆ ಕೋರಿ ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡರು ಕೂಡ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಕೂಡಲೆ ಆತನನ್ನು ಬಂಧಿಸಿ ಗಡಿಪಾರು ಮಾಡಬೇಕಿದೆ. ಇಂತಹ ಪುಂಡಾಟಿಕೆಗಳು ಮುಂದುವರೆದಲ್ಲಿ ಕರ್ನಾಟಕದಲ್ಲಿ ತಮಿಳು‌ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕರವೇ ಕುಶಾಲನಗರ ಘಟಕದ ಅಧ್ಯಕ್ಷ ಎಂ.ಎಸ್.ಮಣಿಕಂಠ ಮಾತನಾಡಿ, ಪುಂಡರ ಇಂತಹ ಪುಂಡಾಟಿಕೆ ಕಾರಣ ರಾಜ್ಯಗಳ ನಡುವಿನ ಬಾಂಧವ್ಯ ಹದಗೆಡಲು ಕಾರಣವಾಗಲಿದೆ. ಕರ್ನಾಟಕದಲ್ಲಿ ಶೇ.30 ರಷ್ಟು ತಮಿಳಿಗರು ನೆಲೆ ಕಂಡುಕೊಂಡಿದ್ದಾರೆ ಎಂಬ ವಿಚಾರ ಮರೆಯಬಾರದು.ಕೂಡಲೆ ಕನ್ನಡಿಗನ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕೆ.ಎಸ್.ಶಿವ, ಸಂಚಾಲಕ ರಂಗಸ್ವಾಮಿ, ಜೈರಾಜ್ ಆಚಾರ್ಯ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!