ಕುಶಾಲನಗರ: ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದು ವಿವಾದ ಸೃಷ್ಠಿಸಿದ ಸಂಪತ್ ಸಹೋದರನ ಮದುವೆ ಸಮಾರಂಭದಲ್ಲಿ ಮಾಜಿ ಸಚಿವ ಜೆಡಿಎಸ್ ತೊರೆದು ಹಾಲಿ ಕಾಂಗ್ರೆಸ್ ಪಕ್ಷದಲ್ಲಿರುವ ಬಿ.ಎ.ಜೀವಿಜಯ ಪಾಲ್ಗೊಂಡಿರುವ ಚಿತ್ರ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು,
ಜೀವನದಲ್ಲಿ ನನ್ನದೇ ಆದ ಕೆಲವು ಸಾಮಾಜಿಕ ಮೌಲ್ಯಗಳನ್ನು ಅಳವಸಿಕೊಂಡಿರುವ ಕಾರಣ ನನ್ನ ಮನೆಗೆ ಸಹಕಾರ ಕೋರಿ ಬರುವವರಿಗೆ ಸಹಾಯದ ಜೊತೆಗೆ ಅಂತಹವರ ಸಾಮಾಜಿಕ ಶುಭ ಸಮಾರಂಭ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಈ ನಡುವೆ ಮದುವೆ ಸಮಾರಂಭವೊಂದರಲ್ಲಿ ಸಂಪತ್ ಜೊತೆ ಕಾಣಿಸಿಕೊಂಡಿರುವ ಬಗ್ಗೆ ನನಗೆ ಸರಿಯಾಗಿ ನೆನಪಿಲ್ಲ.
ಒಂದು ವೇಳೆ ಪಾಲ್ಗೊಂಡಿರಬಹುದು ಇಲ್ಲದೆಯೂ ಇರಬಹುದು ಎಂದು ದ್ವಂದ್ವ ಹೇಳಿಕೆ ನೀಡಿದ ಜೀವಿಜಯ,
ಇದು ಬಿಜೆಪಿಗರು ತಿರುಚಿದ ಫೊಟೊ ಕೂಡ ಆಗಿರಬಹುದು ಎಂದರು. ಉದ್ಯಮ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ನನ್ನ ಪುತ್ರನ ಬಳಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರಾಜು ಎಂಬವರ ಸಂಬಂಧಿ ಈ ಸಂಪತ್ ಎಂಬುದು ಇತ್ತೀಚೆಗಷ್ಟೇ ನನಗೆ ತಿಳಿದುಬಂದಿದೆ.
ಮೊಟ್ಟೆ ಪ್ರಕರಣದಲ್ಲಿ ಕಾಂಗ್ರೆಸ್ ಹೆಸರು ಕೆಡಿಸಲು ಬಿಜೆಪಿ ಹಣೆದಿರುವ ಷಡ್ಯಂತ್ರ ಇದು.
ಈಗಾಗಲೆ ಎಲ್ಲೆಡೆ ಸಂಪತ್ ಹಾಗೂ ಶಾಸಕ ಅಪ್ಪಚ್ಚುರಂಜನ್ ನಡುವೆ ಒಡನಾಟದ ಬಗ್ಗೆ ತಿಳಿದುಬಂದಿದೆ. ಜಿಪಂ ಮೂಲಕ ಸಂಪತ್ ಗೆ ಅಪ್ಪಚ್ಚು ರಂಜನ್ ತುಂಡುಗುತ್ತಿಗೆ ಕೊಡಿಸಿದ್ದಾರೆ. ಈ ನಡುವೆ ಹಿಂದುತ್ವ ಪ್ರೇಮಿಗಳು ಯಾವುದೇ ಪಕ್ಷದವರಾದರೂ ಆರ್ ಎಸ್ ಎಸ್ ನಲ್ಲಿ ತೊಡಗಿಸಿಕೊಳ್ಳಬಹುದೆಂಬ ಅಪ್ಪಚ್ಚುರಂಜನ್ ಹೇಳಿಕೆ ಹಾಸ್ಯಾಸ್ಪದ. ಸಂಪತ್ ಗೆ ಶಾಸಕರು ನೀಡುತ್ತಿರುವ
ತುಂಡು ಗುತ್ತಿಗೆ ಹೆಸರಿನಲ್ಲಿ ಹಾಗೂ ಹೆದರಿಸಿ ಬೆದರಿಸಿ ಕಾಂಗ್ರೆಸ್ ಗೆ ಕಳಂಕ ತರುವ ಹೇಳಿಕೆ ಹೊರಡಿಸಿದ್ದಾರೆ. 70 ದಶಕದಿಂದಲೂ ಜೆಡಿಎಸ್ ನಲ್ಲಿದ್ದ ತನಗೆ ಪ್ರತಿಯೊಬ್ಬ ಕಾರ್ಯಕರ್ತನ ಬಗ್ಗೆ ಅರಿವಿದೆ. ಈ ಸಂಪತ್ ಜೆಡಿ ಎಸ್ ಕಾರ್ಯಕರ್ತ ಅಲ್ಲ, ಕಾಂಗ್ರೆಸ್ ಸದಸ್ಯತ್ವ ಕೂಡ ಹೊಂದಿಲ್ಲ. ಇದೆಲ್ಲ ಬಿಜೆಪಿಯ ಹುನ್ನಾರ. ಕೊಡಗಿನಲ್ಲಿ ಎರಡೂ ಶಾಸಕ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ವಿಚಲಿತರಾಗಿ ಇಂತಹ ಷಡ್ಯಂತ್ರ ಹೆಣೆಯಲಾಗಿದೆ ಎಂದು ಜೀವಿಜಯ ಆರೋಪಿಸಿದರು.
Back to top button
error: Content is protected !!