ಕುಶಾಲನಗರ ಆಗಸ್ಟ್ 21.
ಹುಣಸೂರು ತಾಲೂಕಿನ ಮರದೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ಭಾರಿ ನಿರಾವರಿ ಸಚಿವ ಗೋವಿಂದ ಕಾರಜೋಳ ರವರಿಗೆ ಮನವಿ ಮಾಡಿದರು.
ಶನಿವಾರ ರಾತ್ರಿ ಕೊಡಗು ಜಿಲ್ಲೆಯ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶಾಸಕ ಎಚ್ ಪಿ ಮಂಜುನಾಥ್ ಬಾರೀ ನೀರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ, ಹುಣಸೂರು ತಾಲೂಕಿನ ಮರದೂರು ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ತಾವು ಈಗಾಗಲೇ ವಿಧಾನ ಸೌಧ ಅಧಿವೇಶನದೊಳಗೆ ಭರವಸೆ ನೀಡಿದ್ದಿರಿ, ಆದರೆ ಇಲ್ಲಿಯವರೆಗೆ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೆಂದು ತಿಳಿಸಿ ಕೂಡಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿ ಜೊತೆಗೆ ಕಳೆದ ಎರಡು ವರ್ಷಗಳಿಂದ
ನೀರಾವರಿ ಇಲಾಖೆ ವತಿಯ ಎಸ್ಸಿ , ಎಸ್ಟಿ ಹಾಗೂ ಸಾಮಾನ್ಯ ವರ್ಗದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರಸಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇನ್ನೂ ಅನುದಾನ ನೀಡಿಲ್ಲ ಆದ್ದರಿಂದ ಕೂಡಲೇ ಗಂಗಾ ಕಲ್ಯಾಣ ಯೋಜನೆಗೆ ಅನುದಾನ ನೀಡುವುದರೊಂದಿಗೆ ಇಲಾಖೆಯ ಇತರೆ ಕಾಮಗಾರಿಗಳನ್ನು ಕೈಗೊಳ್ಳಲು ಕನಿಷ್ಟ 10 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಕೊಡಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಿದರು.
ಶಾಸಕ ಮಂಜುನಾಥ್ ರವರ ಮನವಿಗೆ ಸ್ಪಂದಿಸಿದ ಸಚಿವ ಗೋವಿಂದ ಕಾರಜೋಳರವರು ಮರದೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಇದಲ್ಲದೆ ಗಂಗಾ ಕಲ್ಯಾಣ ಯೋಜನೆಯಡಿ ತಲಾ ಬೋರ್ವೆಲ್ ಒಂದಕ್ಕೆ 50 ಸಾವಿರ ರೂ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಶಂಕರೇಗೌಡ, ಮುಖ್ಯ ಅಭಿಯಂತರ (ಸಿ.ಇ) ವೆಂಕಟೇಶ್, ಸೂಪರಿಡೆಂಟ್ ಇಂಜಿನಿಯರ್ (ಎಸ್ ಇ) ಚನ್ನಕೇಶವ ಹುಣಸೂರು ನೀರಾವರಿ ನಿಗಮದ ಎಇಇ ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
Back to top button
error: Content is protected !!