ಕುಶಾಲನಗರ, ಆ 20:1 6.08.2022 ರಂದು ಹುಣಸೂರು ತಾಲೂಕು ಕೂಡ್ಲೂರು ಗ್ರಾಮದಲ್ಲಿ, ಥಾಮಸ್ ಎಂಬವರು ಸಾಕಿದ್ದ ಲಕ್ಷ ಮೌಲ್ಯದ ಬೆಲೆ ಬಾಳುವ ಎರಡು ಎಚ್.ಎಫ್. ಹಸುಗಳ ಕಳ್ಳತನ ಪ್ರಕರಣ ಸಂಬಂಧಿಸಿದಂತೆ
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಹಣಸೂರು ಉಪಾಧೀಕ್ಷಕರಾದ ರವಿ ಪ್ರಸಾದ್ ರವರ ಆದೇಶದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಐ. ಸಿ.ವಿ.ರವಿ, ರವರ ನೇತೃತ್ವದಲ್ಲಿ ಖಚಿತ ಮಾಹಿತಿಯೊಂದಿಗೆ ದಿನಾಂಕ 18.08 2022 ರಂದು ರತ್ನಪುರಿ ಗ್ರಾಮದ ಸ್ಮಶಾಣದ ಬಳಿ ಆರೋಪಿಗಳಾದ ಮಹಮ್ಮದ್ ರಫೀಕ್ ಬಿನ್ ಮಹಮ್ಮದ್ ಯಾಕೂಬ್, ಮಹಮ್ಮದ್ ನಿಷಾದ್ ಬಿನ್ ಮಹಮ್ಮದ್ ಮುಜೀಬ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳಿಂದ ವಿವಿಧೆಡೆಯಿಂದ ಕಳ್ಳತನ ಮಾಡಿದ್ದ, ಒಟ್ಟು ಆರು ಬೆಳೆ ಬಾಳುವ ಹಸುಗಳನ್ನು ವಶಕ್ಕೆ ಪಡೆದು ಅವುಗಳನ್ನು, ರಕ್ಷಿಸಿ ಮತ್ತು ಕಳ್ಳತನ ಮಾಡಿ ಹಸುಗಳನ್ನು ಸಾಗಿಸಲು ಉಪಯೋಗಿಸುತ್ತಿದ್ದು, (ಕೆ.ಎ. 135-2087) ಪಿಕ್ ಅಪ್ ಗೂಡ್ಸ್, ವಾಹನವನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ಒಟ್ಟು ಮೂರು ಪ್ರಕರಣಗಳು ಪತ್ತೆ ಆಗಿದ್ದು ಆರೋಪಿಗಳನ್ನು ನಾಯಾಲಯಕ್ಕೆ, ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಜಮೀರ್ ಅಹಮದ್, ಪಿ.ಎಸ್.ಐ ಸಿದ್ಧರಾಜು, ಎ.ಎಸ್.ಐ ಅಂತೋಣಿ ಕ್ರೂಸ್, ಪಿ.ಸಿ, ವಿಜಯರಘು, ಪಿ.ಸಿ, ಪ್ರಸನ್ನ, ಕುಮಾರ್, ಲಿಖಿತ್ ಹಾಗೂ ಹೆಚ್.ಸಿ, ವಸಂತ (ಜಿಲ್ಲಾ ಕಛೇರಿ) ಮತ್ತು ಎ.ಪಿ.ಸಿ ಸುಂದರ್ ಮತ್ತು ಇತರರು ಭಾಗವಹಿಸಿದ್ದರು.
Back to top button
error: Content is protected !!