ಕುಶಾಲನಗರ, ಆ 17:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳಲಾಗಿದೆ.
ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಚಂದ್ರಶೇಖರ್ ತಂಡ ದಾಳಿ ಮಾಡಿ ಮಾರಾಟಕ್ಕೆ ಇಟ್ಟಿದ್ದ 30 ಸಾವಿರ ರೂ ಮೌಲ್ಯದ 1.915 ಗ್ರಾಂ ಒಣಗಿದ ಗಾಂಜಾ, 2,910 ರೂ ನಗದು, ಒಂದು ಸ್ಕೂಟಿ, 3 ಬೈಕ್ ಗಳು ಸೇರಿದಂತೆ ವಿವಿಧ ಕಂಪನಿಯ 6 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡು ಆರೋಪಿಗಳಾದ ಚೇತನ್, ಕಿರಣ್ ಕುಮಾರ್, ಪ್ರವೀಣ್, ಸೂರ್ಯ, ಪ್ರತಾಪ್ ಎಂಬವರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ, ಉಪ ಅಧೀಕ್ಷಕರಾದ ಆರ್. ವಿ.ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ ನಿರೀಕ್ಷಕರಾದ ಬಿ.ಜೆ. ಮಹೇಶ್ ಸೂಚನೆಯಂತೆ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಪಿ ಎಸ್ ಐ ಭಾರತಿ, ಎ.ಎಸ್.ಐ ಎಂ ಎ ಗೋಪಾಲ್, ಕುಮಾರಿ, ಸಿಬ್ಬಂದಿ ಗಳಾದ ಮಂಜುನಾಥ್, ಅಜಿತ್, ಉದಯ, ಪ್ರವೀಣ್, ಸುದೀಶ್, ಪ್ರಕಾಶ್, ರಂಜಿತ್ ಕುಮಾರ್, ದಿನೇಶ್, ಶಾಫಿನ್ ಅಹಮದ್, ಮುನಾವರ್, ಪಾಷ, ಧನುಕುಮಾರ್, ಸಿ ಡಿ ಆರ್ ಘಟಕದ ಸಿಬ್ಬಂದಿ ರಾಜೇಶ್, ಗಿರೀಶ್, ಪ್ರವೀಣ್, ಚಾಲಕ ಯೋಗೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!