ಕುಶಾಲನಗರ, ನ 15: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿ ಎ ) ಬಹುಮತದೊಂದಿಗೆ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್ ನೇತೃ ತ್ವದಲ್ಲಿ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ನಗರದ ಗಣಪತಿ ದೇವಾಲಯದ ಮುಂಭಾಗದಲ್ಲಿ ಜಯ ಘೋಷ ಕೊಗುವ ಮೂಲಕ ಪಟಾಕಿ ಸಿಡಿಸಿ ಸಿಹಿಹಂಚಿ ಗೆಲುವು ಸಂಭ್ರಮಿಸಿ ವಿಜಯೋತ್ಸವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಯುವ ಮೋರ್ಚಾದ ಅಧ್ಯಕ್ಷ ರಾಮನಾಥನ್ ನೈತಿಕವಾಗಿ ,ರಾಜಕೀಯವಾಗಿ ಚುನಾವಣೆಯನ್ನು ಎದುರಿಸಲಾಗದೆ ಕಾಂಗ್ರೆಸ್ ಪಕ್ಷ ಹಾಗೂ ಎಂಜಿಬಿ ಮೋದಿ ವಿರೋಧಿಗಳ ತಂಡವನ್ನು ಕಟ್ಟಿಕೊಂಡು ಸುಳ್ಳು ಆರೋಪಗಳನ್ನು ಸೃಷ್ಟಿ ಮಾಡಿ ಮತ ಚೋರಿ ಎಂಬ ಹೊಸ ನಾಟಕವಾಡಿದರು. ಅದರ ಜೊತೆಯಲ್ಲಿ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಮೂಲಕ ದ್ವೇಷ ಹರಡಿದರು.ಇದರ ಎಲ್ಲಾ ಪರಿಣಾಮ ಇಂದು ಮತದಾರ ಸರಿಯಾದ ಉತ್ತರವನ್ನು ನೀಡಿದ್ದಾರೆ. ಮುಂದೆ ಕರ್ನಾಟಕ ವಿಧಾನ ಸಭಾ ಚುನಾವಣೆ ಕೂಡ ಇದೇ ಮಾದರಿಯಲ್ಲಿ ಗೆಲುವು ಕಾಣುವುದು ನಿಶ್ಚಿತ ಎಂದರು.
ನಗರ ಬಿಜೆಪಿ ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟದ 202 ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಂತೋಷದ ವಿಷಯವಾಗಿದೆ. ಮುಂದೆ ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸಿದರು.
ವಿಜಯೋತ್ಸವ ಸಂದರ್ಭ ಪಕ್ಷದ ಪ್ರಮುಖರಾದ ಬಿ.ಅಮೃತ್ ರಾಜ್, ಎಂ.ಡಿ.ಕೃಷ್ಣಪ್ಪ,ಚಂದ್ರಶೇಖರ್ ಹೇರೂರು,ಎಂ.ವಿ.ನಾರಾಯಣ್, ಗಣಿಪ್ರಸಾದ್ ಕುಮಾರಪ್ಪ, ಜಿ.ಎಲ್.ನಾಗರಾಜ್, ಆಸಿಫ್ ಸಿ.ಎಂ.ಅಮೃತ್ , ಸುಮನ್ ಮತ್ತಿತರರು ಇದ್ದರು.
Back to top button
error: Content is protected !!