ಕುಶಾಲನಗರ, ಆ 14:
12ನೇ ಶತಮಾನದ ಪ್ರಮುಖ ಶರಣರಲ್ಲಿ ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಬುದ್ಧನಾಗಿ ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದವರು ನುಲಿಯ ಚಂದ್ರಯ್ಯ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಆದ ಜಿಲ್ಲಾ ಕೊರಮ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಎಚ್.ಕೆ.ಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಿದ್ದ ನುಲಿಯ ಚಂದ್ರಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕಡಿಮೆ ಜನಸಂಖ್ಯೆಯನ್ನು ಕೊರಮ ಸಮುದಾಯ ಹೊಂದಿದೆ. ಆದ್ದರಿಂದ ಕೊರಮ ಜನಾಂಗಕ್ಕೆ ಹೆಚ್ಚಿನ ಸಹಕಾರವನ್ನು ಸರ್ಕಾರ ಒದಗಿಸಬೇಕು.ಅವರ ಉಪ ಕಸುಬುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ನುಲಿಯ ಚಂದ್ರಯ್ಯ ಅವರ ಕಾಯಕ ನಿಷ್ಠೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಚಂದ್ರಯ್ಯ ಅವರು ಕಾಯಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇರಬೇಕು ಎಂಬುದನ್ನು ಚಂದ್ರಯ್ಯ ಅವರು ಬಯಸಿದ್ದರು ಎಂದರು.ನಶಿಸಿ ಹೋಗುತ್ತಿರುವ ನಮ್ಮ ಕುಲಕಸುಬು ಅನ್ನು ಉಳಿಸಿ ಬೆಳೆಸಬೇಕಾದ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಮಾಜಕ್ಕೆ ಸಂದೇಶ ಸಾರಿದ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ನುಲಿಯ ಚಂದ್ರಯ್ಯ ಅವರ ಪಾತ್ರ ಮಹತ್ವದಾಗಿದೆ ಎಂದರು.ಬಸವಣ್ಣ ಅವರ ಸಮಕಾಲೀನ ವಚನಕಾರನಾದ ನುಲಿಯ ಚಂದ್ರಯ್ಯ ಬಹು ಶ್ರೇಷ್ಠ ವಚನಕಾರರು ಎಂದು ಬಣ್ಣಿಸಿದರು.
ಕನ್ನಡ ಸಂಯುಕ್ತ ಪಿಯು ಕಾಲೇಜಿನ ಕನ್ನಡ ಅಧ್ಯಾಪಕ ಮೆ.ನಾ.ವೆಂಕಟನಾಯಕ್ ಮಾತನಾಡಿ, ನುಲಿಯ ಚಂದ್ರಯ್ಯ ಅವರು 1160ರಲ್ಲಿ ಜನಿಸಿದ್ದು,ಸುಮಾರು 60ಕ್ಕೂ ವಚನಗಳನ್ನು ರಚಿಸಿದ್ದಾರೆ.ಹಗ್ಗವನ್ನು ನೇಯುವುದರಲ್ಲಿ ಬರುತ್ತಿದ್ದ ಆದಾಯವನ್ನು ಸಮಾಜದ ದಾಸೋಹಕ್ಕಾಗಿ ಉಪಯೋಗ ಮಾಡುತ್ತಿದ್ದರು.ಇವರು ಲಿಂಗಪೂಜೆಗೆ ಹೆಚ್ಚು ಮಹತ್ವ ಕೊಡದೆ ಕಾಯಕಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು ಎಂದು ಹೇಳಿದರು.
ಈ ಸಂದರ್ಭ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್,
ಶಿಕ್ಷಕರಾದ ಗೋಪಾಲಕೃಷ್ಣ, ರಮ್ಯ,ಅನ್ಯಿಲಾ ರೇಬಾ,ಸರಸ್ವತಿ,ಉಷಾ,ಚಂದ್ರಮ್ಮ,ಸಂಜನಾ ಉಪಸ್ಥಿತರಿದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಚನಗಾಯದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Back to top button
error: Content is protected !!