ಪ್ರಕಟಣೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಪ್ರತಿಯೊಬ್ಬರು ಪಾಲ್ಗೊಳ್ಳಿ: ಸಾಗರ್ ತೊರೆನೂರು

ಕುಶಾಲನಗರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 (ಜಾತಿಗಣತಿ) ವೇಳೆ ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯು ತಪ್ಪದೇ ಭಾಗವಹಿಸಲು ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡ ಸಾಗರ್ ತೊರೆನೂರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ “ಹಿಂದೂ” ಎಂದು, ಜಾತಿಯ ಕಾಲಂನಲ್ಲಿ “ಲಿಂಗಾಯತ” ಅಥವಾ “ವೀರಶೈವ ಲಿಂಗಾಯತ” ಎಂದು ಹಾಗೂ ಉಪಜಾತಿ ಕಾಲಂನಲ್ಲಿ ತಾವು ಸೇರಿದ ಉಪಜಾತಿಯ ಸಂಕೇತ ಸಂಖ್ಯೆಯನ್ನು ಖಚಿತಪಡಿಸಿಕೊಂಡು ಬರೆಸಬೇಕು. ಈ ಮಾಹಿತಿಯನ್ನು ಸರಿಯಾಗಿ ದಾಖಲಿಸಿದ್ದಾರೆಯೇ ಎಂಬುದನ್ನು ದೃಢಪಡಿಸಿ ಒಪ್ಪಿಗೆ ನೀಡಲು ಅವರು ಸಮುದಾಯದ ಬಂಧುಗಳಿಗೆ ವಿನಂತಿ ಮಾಡಿದ್ದಾರೆ.

ಜಾತಿ ಜನಗಣತಿಯ ಕುರಿತು ಸಮುದಾಯದಲ್ಲಿ ಗೊಂದಲಗಳು ಉಂಟಾಗಿವೆ. ಕೆಲವರು ಲಿಂಗಾಯತ ಧರ್ಮವೆಂದು, ಕೆಲವರು ವೀರಶೈವ ಲಿಂಗಾಯತ ಧರ್ಮವೆಂದು ಹೇಳಿಕೆ ನೀಡುತ್ತಿದ್ದಾರೆ. ಸದ್ಯ ನಾವೆಲ್ಲ ಹಿಂದೂ ಧರ್ಮದಡಿಯಲ್ಲಿ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ.

ಲಿಂಗಾಯತ ಅಥವಾ ವೀರಶೈವ ಲಿಂಗಾಯತ ಧರ್ಮಕ್ಕೆ ಅಧಿಕೃತ ಮಾನ್ಯತೆ ಸಿಕ್ಕ ನಂತರ, ಧರ್ಮ ಕಾಲಂನಲ್ಲಿ ನಮ್ಮ ಧರ್ಮವನ್ನು ದಾಖಲಿಸುವುದು ಸೂಕ್ತ ಎಂದಿದ್ದಾರೆ.

ಲಿಂಗಾಯತ ಸಮುದಾಯದ ಜನರು ಗೊಂದಲಕ್ಕೊಳಗಾಗದೇ, ಸಮೀಕ್ಷೆಯಲ್ಲಿ ಪಾಲ್ಗೊಂಡು ಅಧಿಕೃತವಾಗಿ ಭಾರತೀಯ ಒಕ್ಕೂಟದ ವ್ಯವಸ್ಥೆಯಡಿ ತಮ್ಮ ಮಾಹಿತಿ ನೊಂದಾಯಿಸಲು ಸಾಗರ್ ತೊರೆನೂರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!