ಕುಶಾಲನಗರ, ಸೆ. 23: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ. ಮಡಿಕೇರಿ ಇದರ 5. ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋಮವಾರಪೇಟೆ ತಾಲ್ಲೂಕಿನಿಂದ ಕೂಡಿಗೆ ಎಸ್. ಆರ್. ಸುನಿಲ್ ರಾವ್ ನವರು ಆಯ್ಕೆ ಗೊಂಡಿರುತ್ತಾರೆ.
ಇದರ ಅಂಗವಾಗಿ ಕೂಡಿಗೆ ಯಲ್ಲಿ ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷರು ನಿರ್ದೇಶಕರು ಸೇರಿದಂತೆ ಅನೇಕ ಮಂದಿ ಒಳಗೊಂಡಂತೆ ಸಾರ್ವಜನಿಕರು ಸುನಿಲ್ ರಾವ್ ನವರಿಗೆ ಸನ್ಮಾನ ಮಾಡುವ ಮೂಲಕ ವಿಜಯೋತ್ಸವ ಆಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ .ಕೆ. ಹೇಮಂತ್ ಕುಮಾರ್, ನಿರ್ದೇಶಕರಾದ ಕೆ.ಪಿ. ರಾಜು ಎಸ್ ಎಸ್ ಕೃಷ್ಣ, ರಾಮಚಂದ್ರ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಅನಂತ. ಶಿವಕುಮಾರ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಚಂದ್ರು ಮೂಡ್ಲಿಗೌಡ, ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪುರುಷೋತ್ತಮ್, ಹನಮ ಸೇವಾ ಸಮಿತಿ ಕಾರ್ಯದರ್ಶಿ ಧರ್ಮ, ನಿವೃತ್ತ ಶಿಕ್ಷಕ ರಾಜೇಗೌಡ, ನಕೋಲ್, ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!