ಕುಶಾಲನಗರ, ಸೆ. 12: ತೊರೆನೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಟಿ.ಟಿ. ಪ್ರಕಾಶ್ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡಿ ಒಕ್ಕೂಟದ ವತಿಯಿಂದ ಹೈನುಗಾರಿಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಅದರ ಸಮರ್ಪಕವಾದ ಬಳಕೆಯನ್ನು ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸದುಪಯೋಗ ಪಡಿಸಿಕೊಳ್ಳಬೇಕು, ಅಲ್ಲದೆ ಹಸುಗಳಿಗೆ ಒಕ್ಕೂಟದ ನಿಯಮಾನುಸಾರ ಚಿಕಿತ್ಸೆ, ಮತ್ತು ಗರ್ಭಧಾರಣೆಗೆ ಸಂಬಂಧಿಸಿದಂತೆ ಎಲ್ಲಾ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆಧ್ಯತೆ ಅನುಗುಣವಾಗಿ ನೂತನ ಕಟ್ಟಡಕ್ಕೆ ಒಕ್ಕೂಟದ ವತಿಯಿಂದ ಅನುದಾನವನ್ನು ನೀಡಲಾಗುವುದು. ಎಂದು ಕೆ.ಕೆ . ಹೇಮಂತ್ ಕುಮಾರ್ ತಿಳಿಸಿದರು.
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ. ಬಿ. ವೀಣಾ ಪಶು ಸಂರಕ್ಷಣೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಟಿ.ಡಿ.ಉದಯಕುಮಾರ್, ನಿರ್ದೇಶರಾದ ಎ.ಎನ್. ಅಣ್ಣಯ್ಯ, ಟಿ.ಎನ್. ಗರೀಶ್, ಟಿ.ಎಂ. ಚಂದ್ರು, ಟಿ.ಎಲ್ ಪುಟ್ಟಸ್ವಾಮಿ, ಹನುಮಪ್ಪ, ಕುಮಾರಿ, ನಾಗಮ್ಮ, ಕಾರ್ಯದರ್ಶಿ ಟಿ.ಎಸ್. ಶಿವರಾಜ್ , ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.
Back to top button
error: Content is protected !!