ಸಭೆ

ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ‌ ಮಹಾಸಭೆ

ಕುಶಾಲನಗರ, ಸೆ 13:ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ‌ ಮಹಾಸಭೆ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ‌ನಡೆಯಿತು.

ಕಳೆದ ಸಾಲಿನ ಮಹಾಸಭೆ ವರದಿ ಅಂಗೀಕಾರ, ಪ್ರಸಕ್ತ ಸಾಲಿನ ಆಡಳಿತ ಮಂಡಳಿ‌ ವರದಿ ದಾಖಲು ಮಾಡುವುದು, ಲೆಕ್ಕ ಪರಿಶೋಧನ ವರದಿ, ಜಮಾ ಖರ್ಚು, ಲಾಭ ನಷ್ಟದ ತಖ್ತೆ, ಆಸ್ತಿ ಜವಬ್ದಾರಿ ತಖ್ತೆ ಪರಿಶೀಲಿಸಿ ಅಂಗೀಕರಿಸುವುದು, ನಿವ್ವಳ‌ಲಾಭದ ವಿಲೇವಾರಿ ಮಂಜೂರು, ಬಡ್ಜೆಟ್ ಗಿಂತ ಹೆಚ್ಚಿನ ಖರ್ಚು ಮಂಜೂರಾತಿ ಪಡೆಯುವುದು, ಮುಂಬರುವ ವರ್ಷಕ್ಕೆ ಸಮಿತಿಯಿಂದ ಸಿದ್ದಪಡಿಸಲಾದ ಸಂಘದ ಕಾರ್ಯಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆ, ಹುದ್ದೆಗಳಿಗೆ ನೇಮಕಾತಿ, ಎ ತರಗತಿ ನಿಷ್ಕ್ರಿಯ ಸದಸ್ಯರ ವಿರುದ್ದ ಕ್ರಮಗಳ ಸೇರಿದಂತೆ ಇನ್ನಿತರೆ ಸಂಘದ ಚಟುವಟಿಕೆಗಳ‌ ಬಗ್ಗೆ ಚರ್ಚೆ ನಡೆಯಿತು.
ಸಂಘದಲ್ಲಿ ವ್ಯವಹಾರ ನಡೆಸದ ಸದಸ್ಯರ ಮತದಾನದ ಹಕ್ಕು ರದ್ದು ಗೊಳಿಸುವ, ಶೇರುದಾರರಿಗೆ ಡಿವಿಡೆಂಡ್ ತಡೆಹಿಡಿಯುವ ವಿಚಾರದ ಬಗ್ಗೆ ಕಾನೂನಿನಲ್ಲಿರುವ ಅವಕಾಶದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಈ ಬಗ್ಗೆ ಇರುವ ಸಹಕಾರ ಸಂಘದ ಕಾನೂನಿನ ಬಗ್ಗೆ ಆಡಿಟರ್ ವಿವರ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಬಿ.ಜಗದೀಶ್, ನಿರ್ದೇಶಕರಾದ ಸಿ.ವಿ.ನಾಗೇಶ್, ಕೆ.ಪಿ.ರಾಜು, ಎಸ್.ಸಿ.ಪ್ರಕಾಶ್, ಎಂ.ಡಿ.ರವಿಕುಮಾರ್, ಕೆ.ಕೆ.ಹೇಮಕುಮಾರ್, ಕೆ.ಆರ್.ಕಸ್ತೂರಿ, ರೇಖಾ, ಎಂ.ಡಿ.ರಮೇಶ್, ಸಿಇಒ ಕೆ.ಕೆ.ಸುನೀತ, ಕಾನೂನು ಸಲಹೆಗಾರ ಕೆ.ಸಿ.ಶಿವಮೂರ್ತಿ ಸೇರಿದಂತೆ ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!