ಕ್ರೈಂ

ಲಂಚ ಸ್ಬೀಕಾರ ಸಂದರ್ಭ ನೀರಾವರಿ ನಿಗಮ ಲೆಕ್ಕ ಸಹಾಯಕ ಲೋಕಾ ಬಲೆಗೆ

ಕುಶಾಲನಗರ, ಸೆ 11:ಕುಶಾಲನಗರದಲ್ಲಿರುವ ಕಾವೇರಿ ನೀರಾವರಿ ನಿಗಮದ ಹಾರಂಗಿ ಪುನರ್ವಸತಿ ವಿಭಾಗದ ಕಛೇರಿಯ ಕಾರ್ಯಪಾಲಕ ಅಭಿಯಂತರ ಕಛೇರಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಲಂಚ ಸ್ವೀಕಾರ ಸಂದರ್ಭ ಲೋಕಾಯುಕ್ತ ದಾಳಿ‌ ನಡೆಸಿದ ಘಟನೆ ನಡೆದಿದೆ.
ವಿದ್ಯುತ್ ಗುತ್ತಿಗೆದಾರ ಪ್ರಸನ್ನ ಎಂಬಾತನಿಂದ ಒಂದೂವರೆ ಲಕ್ಷದ ಕಾಮಗಾರಿಯ ಬಿಲ್ ಮಾಡಲು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುಣಸೂರಿನ ಆರ್.ಕೃಷ್ಣ ಎಂಬಾತ
35 ಸಾವಿರಕ್ಕೆ‌ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ಈ ಪೈಕಿ
ಗುರುವಾರ 20 ಸಾವಿರ ಹಣ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ
ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಲೋಕೇಶ್, ವೀಣಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಮುಖ್ಯ ಪೇದೆ ಲೋಕೇಶ್ ಸೇರಿದಂತೆ ಸಿಬ್ಬಂದಿಗಳಾದ ಮಂಜುನಾಥ್, ಶಶಿ, ಲೋಹಿತ್, ಪ್ರವೀಣ್ ಕುಮಾರ್, ದೀಪಿಕಾ, ಅರುಣ್ ಕುಮಾರ್, ಸಲಾಹುದ್ದಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!