ಕುಶಾಲನಗರ, ಆ 07: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಗುರುತಿಸಿರುವ ಸ್ಮಶಾನ ಜಾಗದ ವಿವಾದ ತಾರಕಕ್ಕೇರಿದ್ದು ಶಾಸಕರು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸಲು ಗಿರಿಜನ ಕುಟುಂಬಗಳು ಆಗ್ರಹಿಸಿವೆ.
ಗುಡ್ಡೆಹೊಸೂರು ಮತ್ತು ಬೊಳ್ಳೂರು ಗ್ರಾಮಗಳ ನಿವಾಸಿಗಳಿಗೆಂದು ಸುಣ್ಣದಕೆರೆಯಲ್ಲಿ ಸ್ಮಶಾನಕ್ಕೆ ಐದು ಎಕರೆ ಜಾಗ ಗುರುತಿಸಲಾಗಿದೆ. ಆದರೆ ಈ ಭಾಗದ 40 ಕುಟುಂಬಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಆದಿವಾಸಿಗಳಿಗೆಂದು ತೋಟಗಾರಿಕೆ ಇಲಾಖೆ ಹಣ್ಣಹಂಪಲು ಬೆಳೆಯಲು ಒದಗಿಸಿರುವ ವನಪ್ರದೇಶದಲ್ಲಿ ಸ್ಮಶಾನ ನಿರ್ಮಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳ ಅಭಿಪ್ರಾಯ ಸಂಗ್ರಹಿಸದೆ, ಸಮ್ಮತಿ ಪಡೆಯದೆ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದೆ.
ಸದರಿ ಸ್ಥಳದಲ್ಲಿ ನಾಗದೇವರ ಬನ, ಶ್ರೀಚಾಮುಂಡೇಶ್ವರಿ, ಮುನೇಶ್ವರ ದೇವರ ಬನಗಳು ಇದ್ದು ಇಲ್ಲಿ ಸ್ಮಶಾನ ನಿರ್ಮಿಸಿದರೆ ಮುಂದೆ ಗ್ರಾಮಕ್ಕೆ ಭಾರಿ ದುರಂತಕ್ಕೆ ಕಾರಣವಾಗಲಿದೆ ಎಂದು
ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದೇ ಮಾರ್ಗದಲ್ಲಿ ಶಾಲಾ ಮಕ್ಕಳು ತಿರುಗಾಡಬೇಕಿದ್ದು ಭಯದ ವಾತಾವರಣ ನಿರ್ಮಾಣವಾಗಲಿದೆ. ಗ್ರಾಪಂ ನಲ್ಲಿ ಕೆಲವರು ಇಲ್ಲಸಲ್ಲದ ರಾಜಕೀಯ ನಡೆಸಿ ಇಲ್ಲಿ ಸ್ಮಶಾನ ಕ್ಕೆ ಜಾಗ ಗುರುತಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ನಾವುಗಳು ಬೇರೆ ಸ್ಥಳ ಗುರುತಿಸಿದ್ದು ಆ ನಿರ್ಜನ ಪ್ರದೇಶದಲ್ಲಿ ಸ್ಮಶಾನ ನಿರ್ಮಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಸುಣ್ಣದಕೆರೆ ನಿವಾಸಿಗಳಾದ ಶ್ರೀ ಬೇಟೆ ಚಾಮುಂಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಸ್.ಎಂ. ನಾರಾಯಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕವಿತಾ, ಅರ್ಚಕ ಇಂದುಕುಮಾರ್ ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು, ಶಾಸಕರು ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿ ನ್ಯಾಯ ಒದಗಿಸುವಂತೆ
ಲ್ಯಾಂಪ್ಸ್ ನಿರ್ದೇಶಕಿ ಕಮಲ, ಸ್ಥಳೀಯರಾದ ರಜಿತ್, ರಾಜಪ್ಪ, ಮಮತಾ, ಧನಲಕ್ಷ್ಮಿ, ಜ್ಯೋತಿ, ತಮ್ಮು, ಜಾನಕಿ ಮತ್ತಿತರರು ಆಗ್ರಹಿಸಿದ್ದಾರೆ.
Back to top button
error: Content is protected !!