ಕುಶಾಲನಗರ, ಆ 06: ಕುಶಾಲನಗರ ಪ್ರವಾಹ ಸಂತ್ರಸ್ಥರ ಕೇಂದ್ರ ಸಮಿತಿ ಮತ್ತು ಬಡಾವಣೆ ಸಮಿತಿ ಪ್ರಮುಖರು ಹಾರಂಗಿ ಜಲಾಶಯದಲ್ಲಿ ಶೇ 50% ಪ್ರಮಾಣ ಮಾತ್ರ ನೀರು ಶೇಖರಿಸಿ ದಿನನಿತ್ಯ ಹೆಚ್ಚುವರಿ ನೀರು ನದಿಗೆ ಹರಿಸಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೋರಿ ಮನವಿ ಸಲ್ಲಿಸಿದರು.
ಹಾರಂಗಿ ಅಣೆಕಟ್ಟು ಯೋಜನೆ ಅಧೀಕ್ಷಕ ಅಭಿಯಂತರ ಕಚೇರಿಯ ತೆರಳಿ ಸುಮಾರು ಒಂದು ಗಂಟೆ ಕಾಲ ಅಧೀಕ್ಷಕ ಚನ್ನಕೇಶವ ಅವರೊಂದಿಗೆ ಚರ್ಚಿಸಿದರು.
ಹಾರಂಗಿ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆಯಿಂದ ಕುಶಾಲನಗರ ಪಟ್ಟಣ ಮತ್ತು ನದಿ ಪಾತ್ರದ ಜನತೆಗೆ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಸಮಗ್ರ ಚರ್ಚೆ ನಡೆಸಿ ಅಧೀಕ್ಷಕ ಅಭಿಯಂತರ ಚನ್ನಕೇಶವ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ರೀತಿ ಅನಾಹುತ ಸಂಭವಿಸಿದಂತೆ ಅಣೆಕಟ್ಟಿನಿಂದ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳು ವ್ಯಕ್ತಪಡಿಸಿದರು.
ಈ ಸಂದರ್ಭ ದೂರವಾಣಿ ಮೂಲಕ ಕ್ಷೇತ್ರದ ಮಾನ್ಯ ಶಾಸಕ ಅಪ್ಪಚ್ಚುರಂಜನ್ ಕೂಡ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಈ ಸಂದರ್ಭ ಕೂಡಾ ಅಧ್ಯಕ್ಷ ಚರಣ್, ಪಪಂ ಅಧ್ಯಕ್ಷ ಜೈವರ್ಧನ್, ಪ್ರವಾಹ ಸಂತ್ರಸ್ಥರ ಸಮಿತಿಯ ಚಂದ್ರಮೋಹನ್, ವರದ, ಕೊಡಗನ ಹರ್ಷ, ಉದಯ್, ಸುಧೀರ್, ಸಂತೋಷ್ ಮತ್ತಿತರರು ಇದ್ದರು.
Back to top button
error: Content is protected !!