ಕುಶಾಲನಗರ, ಆ 04: ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸೋಮವಾರಪೇಟೆ ತಾಲೂಕು, ಕುಶಾಲನಗರ ಪಟ್ಟಣ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ಸ್ತನ್ಯ ಪಾನ ಸಪ್ತಾಹ ಮತ್ತು ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸ್ತನ್ಯ ಪಾನದ ಮಹತ್ವದ ಬಗ್ಗೆ ಮಕ್ಕಳ ತಜ್ಞರು
ಡಾ.ಶಿವಕುಮಾರ್ , ಫಲಾನುಭವಿಗಳಿಗೆ, ತಾಯಿ ಮತ್ತು ಮಗುವಿನ ಬಾಂಧವ್ಯ, ಹಿಂಡ್ ಮಿಲ್ಕ್ ಫೋರ್ ಮಿಲ್ಕ್ ನಲ್ಲಿ ಅಡಗಿರುವ ಪ್ರೋಟೀನ್ ಮತ್ತು ಕೊಬ್ಬಿನಾಂಶ ಹಾಗೂ ಸಂಪೂರ್ಣ ಹಾಲನ್ನು ಕುಡಿಸಿದಾಗ ತಾಯಿಯಲ್ಲಿ ಉಂಟಾಗುವ ನಿರಾಳ ಮನೋಭಾವನೆ ಬಗ್ಗೆ ಮತ್ತು ಮಗುವಿನ ಸಂತೃಪ್ತಿಯ ಬಗ್ಗೆ, ಆರು ತಿಂಗಳ ತನಕ ಎದೆ ಹಾಲನ್ನು ಮಾತ್ರ ಕುಡಿಸುವಂತೆ ನಂತರ ಪೂರಕ ಆಹಾರದೊಂದಿಗೆ ಎರಡು ವರ್ಷಗಳವರೆಗೆ ಎದೆಹಾಲನ್ನು ಕುಡಿಸುವಂತೆ, ಮಕ್ಕಳ ಮೆದುಳಿನ ಬೆಳವಣಿಗೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸೀಮಂತ ಕಾರ್ಯಕ್ರಮವನ್ನು ಡಾ. ಫಾತಿಮಾ, ಡಾ. ಜೈನಬ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಮತ್ತು ಮೇಲ್ವಿಚಾರಕರು ಪಾಲ್ಗೊಂಡು ನೆರವೇರಿಸಿದರು.
Back to top button
error: Content is protected !!