ಟ್ರೆಂಡಿಂಗ್

ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಮೈಸೂರು ಟ್ರಸ್ಟ್ ಗೆ ಹಸ್ತಾಂತರಿಸಿದ ಪ.ಪಂ

ಕುಶಾಲನಗರ, ಆ 04:
ಕುಶಾಲನಗರದಲ್ಲಿ ಸಾರ್ವಜನಿಕರಿಗೆ ತೊಂದರೆ‌ ನೀಡುತ್ತಿದ್ದ ಮಾನಸಿಕ ಅಸ್ಪಸ್ತೆಯನ್ನು ಕುಶಾಲನಗರ ಪ.ಪಂ ಯು ಮೈಸೂರಿನ ಶರಣ್ಯ ಟ್ರಸ್ಟ್ ಗೆ ಹಸ್ತಾಂತರಿಸುವ ಮೂಲಕ ಮಹಿಳೆಯ ಆರೈಕೆಗೆ ಸಹಕಾರ ನೀಡಿದೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಲ್ಲೆ ಮಾಡುತ್ತಾ, ಜನರಿಗೆ ಬೈಯುತ್ತಾ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ತ ಮಹಿಳೆಯನ್ನು ಮೈಸೂರಿನ ಶರಣ್ಯ ಟ್ರಸ್ಟ್ ಗೆ ಹಸ್ತಾಂತರಿಸಿದೆ. ಕುಶಾಲನಗರ ಪಂಚಾಯಿತಿ ಆರೋಗ್ಯಾಧಿಕಾರಿ ಉದಯ್ ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕರು, ಮಹಿಳೆಯನ್ನು ಸ್ವಚ್ಚಗೊಳಸಿ ಹೊಸ ಉಡುಗೆಯನ್ನು ತೊಡಿಸಿದ್ದಾರೆ. ನಂತರ ವೈದ್ಯರ ಆರೈಕೆಗೆ ಒಳಪಡಿಸಿ, ಪೋಲೀಸ್ ಇಲಾಖೆ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆಯ ಸಹಕಾರದಿಂದ ಮಹಿಳೆಯನ್ನು ಟ್ರಸ್ಟ್ ಗೆ ಒಪ್ಪಿಸಲಾಗಿದೆ. ಪ.ಪಂ ನ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!