ಅವ್ಯವಸ್ಥೆ

ಮುಳ್ಳುಸೋಗೆ ಗ್ರಾಪಂ: ಏಕಬಳಕೆ ಪ್ಲಾಸ್ಟಿಕ್ ವಶ, ದಂಡ ವಸೂಲಿ

ಗ್ರಾಪಂ ಅಧಿಕಾರಿಗಳ ತಂಡದಿಂದ ದಾಳಿ: ಪರಿಶೀಲನೆ

ಕುಶಾಲನಗರ, ಜು 30: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಗ್ರಾಮದ ದಿನಸಿ ಅಂಗಡಿ, ಮಾಂಸ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ಪರಿಶೀಲಿಸಿತು.
ಈ ಸಂದರ್ಭ ಒಟ್ಟು ಅಂದಾಜು ಅರ್ಧ ಕೆಜಿ ಪ್ಲಾಸ್ಟಿಕ್ ಕವರ್ ಗಳನ್ನು ವಶಪಡಿಸಿಕೊಂಡು ರೂ. 1200 ದಂಡ ರೂಪದಲ್ಲಿ ವಸೂಲಿ ಮಾಡಿ ಏಕಬಳಕೆಯ ನಿಷೇಧಿತ ಪ್ಲಾಸ್ಟಿಕ್ ಕವರ್ ಗಳನ್ನು ಬಳಸದಂತೆ ತಿಳುವಳಿಕೆ ಹೇಳಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕರಾದ ಮಂಜುನಾಥ್, ಪಂಚಾಯತ್ ಕ್ಲರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ದಿವ್ಯ ಹಾಗೂ ಗ್ರಂಥಪಾಲಕರಾದ ಪ್ರಮೀಳಾ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!