ಕುಶಾಲನಗರ, ಏ 03:ಕುಶಾಲನಗರ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿರುವ. ಶ್ರೀ ಶಿವ ಬಸವೇಶ್ವರ ಸ್ವಾಮಿಯ 12 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಷ್ಟಬಂಧ ಪುನರ್ ಪ್ರತಿಷ್ಠಾಪನೆ ಹಾಗೂ ಪಾರ್ವತಿ ದೇವಿಯ ಪ್ರತಿಷ್ಠಾಪನಾ ಪೂಜೋತ್ಸವ ತಾ 5 ರಿಂದ ಮೂರು ದಿನಗಳ ಕಾಲ ಜರುಗಲಿದೆ.
ತಾ.5 ರಂದು ಫಲ ಪ್ರಾರ್ಥನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ಜರುಗಲಿವೆ.
ನಂತರ ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5 ಗಂಟೆಯಿಂದ ನವಗ್ರಹ ಹೋಮ,,ಮೃತ್ಯುಂಜಯ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಗ್ಭಲಿ ರಾತ್ರಿ 8-30 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.
ಮರುದಿನ ಮುಂಜಾನೆ 4 ಗಂಟೆಯಿಂದ 4-50 ರ ಒಳಗೆ ಪಾರ್ವತಿ ದೇವಿಯ ಪ್ರತಿಷ್ಠಾಪನೆ, ನಂತರ ವಿವಿಧ ಧಾರ್ಮಿಕ ವಿಧಿಗಳು ನಡೆದು ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.
ತಾ.7 ರಂದು ಬೆಳಗ್ಗೆ 8-30 ರಿಂದ ಸನ್ನಿಧಿಯ ವಿವಿಧ ದೇವತಾ ಮೂರ್ತಿಗಳಿಗೆ ಕಲಾತತ್ಪದಿ ವಾಸ್ತು ಹೋಮಗಳು ಹಾಗೂ ವಿವಿಧ ಪೂಜೆಗಳು ನಡೆಯಲಿವೆ.
ಹಾಗೆಯೇ ಮೂರು ದಿನಗಳು ಕೂಡ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ. ಆದ್ದರಿಂದ ಗ್ರಾಮದ
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Back to top button
error: Content is protected !!