ಕುಶಾಲನಗರ, ಡಿ 12: ನಾವೆಲ್ಲಾ ಒಂದೂ ನಾವೆಲ್ಲಾ ಹಿಂದೂ ಎಂಬ ಭಾವದಿಂದ ಹನುಮ ಜಯಂತಿ ಆಚರಿಸುವ ಮೂಲಕ ನಮ್ಮ ಮನ ಮನೆಗಳಿಂದ ಜಾತಿಯತೆ, ಅಸ್ಪೃಶ್ಯತೆ ದೂರಮಾಡಬೇಕಿದೆ, ಹಿಂದುತ್ವ ಭಾವವನ್ನು ಗಟ್ಟಿಗೊಳಿಸಬೇಕಿದೆ ಎಂದು ಎಂ.ಎಲ್ಸಿ ಸಿ.ಟಿ.ರವಿ ಕರೆ ನೀಡಿದರು.
ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಅಂಗವಾಗಿ ಮುಳ್ಳುಸೋಗೆ ಗ್ರಾಮದಲ್ಲಿ ಗುರುವಾರ ರಾತ್ರಿ
ಮುಳ್ಳುಸೋಗೆಯ
ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿ ವತಿಯಿಂದ ಗ್ರಾಮದ ಸರಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದುತ್ವದ ಭಾವದಿಂದ ಒಂದಾಗಿ ಹನುಮ ಜಯಂತಿಯನ್ನು ಮಾಡಿದರೆ ಮಾತ್ರ ಭವಿಷ್ಯದಲ್ಲಿ ಭಾರತ ಉಳಿಯುತ್ತದೆ.
ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಯಜ್ಞಯಾಗದಿ ಮಾಡುವಾಗ ಅದನ್ನ ಭಂಗಗೊಳಿಸಲು ರಾಕ್ಷಸರು ಬರುತ್ತಿದ್ದರಂತೆ. ಆದರೆ ಈಗ ರಾಕ್ಷಸಿ ಮಾನಸಿಕತೆ ಇರುವ ಜನರು ಇದ್ದಾರೆ.
ನಮ್ಮ ದೇವಾಲಯವನ್ನ ಕಂಡರೆ ಆಗದೇ ಇರುವವರು ಇದ್ದಾರೆ.
ಭಯೋತ್ಪಾದನೆ ಮೂಲಕ ನರ ಸಂಹಾರ ಮಾಡುವ ರಕ್ತಪಿಶಾಚಿಗಳು,
ಜಿಹಾದಿ ಮಾನಸಿಕತೆಯ ಮೂಲಕ ಭಾರತವನ್ನ ಧ್ವಂಸ ಮಾಡುವ ರಾಕ್ಷಸಿ ಮನಸ್ಥಿತಿ ಇರುವಂತಹ ಜನ ಇದ್ದಾರೆ.
ಇದೆಲ್ಲದಕ್ಕೂ ಉತ್ತರ ಒಬ್ಬ ವ್ಯಕ್ತಿ ಕೊಟ್ಟರೆ ಸಾಕಾಗುವುದಿಲ್ಲ.
ಕೇವಲ ಅಧಿಕಾರದ ಮೂಲಕ ಇದು ಸಾಧ್ಯವಾಗುವುದಿಲ್ಲ.
ಇದಕ್ಕೆ ಉತ್ತರವನ್ನ ಸಮಾಜ ಕೊಡಬೇಕು. ಬರೀ ಅಯೋಧ್ಯೆಯ ರಾಮಮಂದಿರ ಜಾಗ ಮಾತ್ರ ಮುಕ್ತ ಅದರೆ ಸಾಲದು. ಶ್ರೀರಂಗಪಟ್ಟಣದ ಮೂಡಲಬಾಗಿಲು ಆಂಜನೇಯ ಸ್ವಾಮಿಯ ದೇವಾಲಯ ಜಾಗವು ಮುಕ್ತವಾಗಬೇಕು. ಮೋಸ, ವಂಚನೆಯಿಂದ ನಮ್ಮಿಂದ ಕಸಿದುಕೊಂಡದ್ದನ್ನು ಬಿಟ್ಟುಕೊಡಬೇಕಾ ಎಂದು ಪ್ರಶ್ನಿಸಿದ ಅವರು, ವಕ್ಫ್ ವಿರುದ್ಧ ಅಬ್ಬರಿಸಿದರು.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಇದೇ ಸಂದರ್ಭ ಮಾಜಿ ಸಚಿವ ಅಪ್ಪಚ್ಚುರಂಜನ್, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಸದಸ್ಯ ಸುಂದರೇಶ್, ಉದ್ಯಮಿ ಎಂ.ಕೆ.ದಿನೇಶ್, ರಘು, ನಂಜುಂಡಸ್ವಾಮಿ, ಮಂಜೇಶ್, ಗಿರೀಶ್ ಮಲ್ಲಪ್ಪ, ರಂಜನ್, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಮತ್ತಿತರರು ಇದ್ದರು.
ವರ್ಲ್ಡ್ ಎಂಎಂಎ ಚಾಂಪಿಯನ್ ಆಜ್ಞಾ ಅಮಿತ್ ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹರಿದು ಬಂದ ಕಲಾವಿದರ ದಂಡು: ಕನ್ನಡ ಚಿತ್ರರಂಗದ ಖ್ಯಾತ ನಟ ಶ್ರೀಮುರಳಿ ಸೇರಿದಂತೆ ಕಲಾವಿದರಾದ ತನಿಷಾ ಕುಪ್ಪಂಡ, ತುಕಾಲಿ ಸಂತೋಷ್-ಮಾನಸ ದಂಪತಿ, ಚಂದ್ರಪ್ರಭ, ಸೂರಜ್ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಭಘೀರ, ಉಗ್ರಂ ಚಿತ್ರಗಳ ಡೈಲಾಗ್, ಹುಡುಗಿಕಣ್ಣು ಹಾಡು ಹಾಡುವ ಮೂಲಕ ನಟ ಶ್ರೀಮುರಳಿ ನೆರೆದಿದ್ದವರನ್ನು ರಂಜಿಸಿದರು. ತನಿಷಾ ನೃತ್ಯ ಮಾಡಿದರು, ಉಳಿದ ಕಲಾವಿದರಿಂದ ಮಿಮಿಕ್ರಿ ಮತ್ತಿತರ ಮನರಂಜನಾ ಕಾರ್ಯಕ್ರಮ ನಡೆಯಿತು.
ಸಮಿತಿ ಅಧ್ಯಕ್ಷ ಎಂ.ಸಿ.ಸಚಿನ್, ಪ್ರಮುಖರಾದ ಅವಿನಾಶ್ ಎ.ಆರ್., ಸಂತೋಷ್, ಹೆಚ್.ಎನ್.ಕಿಶೋರ್, ಎಂ.ಎಸ್.ಸಾಗರ್, ರೋಷನ್ ,ಸಂತೋಷ್ ಕುಮಾರ್ ಎಲ್ ಮತ್ತಿತರರು ಇದ್ದರು.
Back to top button
error: Content is protected !!