ಪ್ರಕಟಣೆ

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ

ಕುಶಾಲನಗರ, ಡಿ 07:ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪಿ.ಎಂ.ರುಕ್ಮಿಣಿ ರವರು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

 ಬಿ.ಜೆ.ಪಿ ಯ ತತ್ವಸಿದ್ಧಾಂತವನ್ನು ಒಪ್ಪಿ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದೆ. ಲೋಕಸಭಾ ವಿಧಾನಸಭಾ ಸ್ಥಳೀಯ ಸಂಸ್ಥೆ ಚುನಾವಣೆಗಳು ಸೇರಿದಂತೆ ಪಕ್ಷದ ಅಭಿವೃದ್ಧಿಗಳ ಗೆಲುವಿಗಾಗಿ ಹಗಲು ರಾತ್ರಿ ಪರಿವೇ ಇಲ್ಲದೆ ಕಾಯ ವಾಚಾ ಮನಸ ದುಡಿದಿದ್ದೆ,ಕಳೆದೊಂದು ದಶಕದಿಂದ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ನಿರಂತರವಾಗಿ ಹಾಗೂ ಎಲ್ಲಾ ಸಭೆಗಳಲ್ಲಿ ಹಾಗೂ ಸಕ್ರಿಯವಾಗಿ ಹೋರಾಟವು ಸೇರಿದಂತೆ ಬಿಜೆಪಿಯ ಧಿರಿಸನ್ನು ಧರಿಸಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಪರಿಪಾಠವನ್ನು ಇಟ್ಟುಕೊಂಡಿದ್ದೆ ನಾನು ಈ ಹಿಂದೆ ಬಿಜೆಪಿಯನ್ನು ಸೇರುವ ಮುನ್ನ ಎರಡು ಬಾರಿ ಮಾದಪಟ್ಟಣ ಗ್ರಾಮದಿಂದ ಗ್ರಾಮ ಪಂಚಾಯಿತಿಯಿಂದ ಚುನಾಯಿತಳಾಗಿದ್ದೆ. 30 ವರ್ಷಗಳ ಹಿಂದೆ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಪ್ರತಿನಿಧಿಯಾಗಿದ್ದೆ ಹಾಲಿ ಇರುವ ಎಲ್ಲ ಸದಸ್ಯರುಗಳಿಗಿಂತ ನಾನು ಜೇಷ್ಠತೆಯಲ್ಲಿ ಪ್ರಥಮವಾಗಿದ್ದೆ. ನನ್ನಂತಹ ಹಿರಿಯ ಮಹಿಳೆಗೆ ಪಕ್ಷ ಅತ್ಯಂತ ಅಗೌರವವಾಗಿ ಹಾಗೂ ಕೆಟ್ಟದಾಗಿ ನಡೆಯಿಸಿಕೊಂಡು ಅಪಮಾನಾ ಮಾಡಿತ್ತು.ಆದ್ದರಿಂದ ನಾನು ರಾಜೀನಾಮೆ ಕೊಟ್ಟಿರುತೇನೆ ಎಂದು ಪಿ.ಎಂ.ರುಕ್ಮಿಣಿ ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!