ಕುಶಾಲನಗರ, ನ 09: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು, ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಭತ್ತ, ಅಡಿಕೆ ಬೆಳೆಯನ್ನು ಹಾನಿಗೊಳಿಸಿದ ಘಟನೆ ನಡೆದಿದೆ.
ಆನೆಕಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಹಾರಂಗಿ ನದಿಯನ್ನು ದಾಟಿ ಸಮೀಪದ ಜಮೀನಿಗೆ ದಾಳಿ ಮಾಡಿ ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಪೈರನ್ನು ತಿಂದು ತುಳಿದ ನಾಶಪಡಿಸುವುದರ ಜೊತೆಯಲ್ಲಿ ಕಳೆದ ಮೂರು ತಿಂಗಳಲ್ಲಿ 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾನಿಗೊಳಿಸಿದೆ. ಯಡನವಾಡು ಮೀಸಲು ಅರಣ್ಯ ಪ್ರದೇಶಗಳ ಕಡೆಯಿಂದಲೂ ಸಹ ಕಾಡಾನೆಗಳ ಹಿಂಡು ಗದ್ದೆಗಳಿಗೆ ದಾಳಿ ಮಾಡಿ ನಿರಂತರ ಬೆಳೆನಾಶ ಮಾಡುತ್ತಿವೆ.
ಕಾಳಿದೇವನ ಹೊಸೂರು , ಹುದುಗೂರು ಗ್ರಾಮದ ದಾದುತ್ತಯ್ಯ, ರಮೇಶ್, ಭರತ್, ಮಂಜುನಾಥ್, ಚಂಗಪ್ಪ ಎಂಬ ರೈತರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿದ ಪರಿಣಾಮವಾಗಿ ಭತ್ತ ಬೆಳೆಯು ಸಂಪೂರ್ಣವಾಗಿ ಹಾಳಾಗಿದೆ.
ಕಾಳಿದೇವನ ಹೊಸೂರು ಗ್ರಾಮದ ದಾದ ಉತ್ತಯ್ಯ ಅವರ 100ಕ್ಕೂ ಹೆಚ್ಚು ಅಡಿಕೆ ಮರಗಳು ಹಾನಿಗೊಳಗಾಗಿವೆ.
ಸ್ಧಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಸೇರಿದಂತೆ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
Back to top button
error: Content is protected !!