ಸಭೆ

ಕುಶಾಲನಗರದಲ್ಲಿ ಹನುಮ ಜಯಂತಿ: ಶಾಸಕರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ

ಕುಶಾಲನಗರ, ಅ 31: ಕುಶಾಲನಗರದಲ್ಲಿ ಡಿ.13 ಕ್ಕೆ ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉಪಸ್ಥಿಯಲ್ಲಿ ಪೂರ್ವಭಾವಿ ಸಭೆ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ ಹನುಮ ಜಯಂತಿ ಆಚರಣೆ ರೂಪುರೇಷೆಗಳ ಬಗ್ಗೆ ಶಾಸಕ ಗಮನಕ್ಕೆ ತಂದರು.
ಹತ್ತು ಮಂಟಪಗಳು ತಮ್ಮ ಕಲಾಪ್ರದರ್ಶನ ನೀಡಲು ಸಮಯದ ಅಭಾವ ಕಾಡುವ ಕಾರಣ ಮಡಿಕೇರಿ ದಸರಾದಂತೆ ಮುಂಜಾನೆವರೆಗೆ ಸಮಯಾವಕಾಶ ಒದಗಿಸಬೇಕಿದೆ, ಮಂಟಪಗಳು ಬರುವ ಮಾರ್ಗಗಳು ದುಸ್ಥಿಯಲ್ಲಿದ್ದು ರಿಪೇರಿ ಕಾರ್ಯ ಆಗಬೇಕಿದೆ, ಮರಗಳ ರಂಬೆಗಳನ್ನು ಕಡಿದು ತೆರವುಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸುವ ಜೊತೆಗೆ ಸರಕಾರದಿಂದ ಅನುದಾನ ಒದಗಿಸಬೇಕಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್ ಗೌಡ, ವೈಯಕ್ತಿಕವಾಗಿ ತಾನು ಎಲ್ಲಾ ಮಂಟಪಗಳಿಗೆ ಆರ್ಥಿಕ ಅನುದಾನ ಒದಗಿಸಲಿದ್ದೇನೆ. ಸಮಿತಿಯ ತೀರ್ಮಾನದಂತೆ ಹನುಮ ಜಯಂತಿ ಆಚರಣೆಗೆ ತನ್ನ ಸಹಕಾರವಿದೆ. ಸರಕಾರದ ಅನುದಾನ ಒದಗಿಸಲು ಪ್ರಯತ್ನಿಸುವ ಭರವಸೆ ನೀಡಿದರು.
ಈ ಸಂದರ್ಭ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,
ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಪುಂಡರೀಕಾಕ್ಷ, ಪ್ರಾ.ಕೃ.ಪ. ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಹಿರಿಯ ವಕೀಲ‌ ಆರ್.ಕೆ.ನಾಗೇಂದ್ರಬಾಬು ಸೇರಿದಂತೆ ವಿವಿಧ ಮಂಟಪಗಳ‌ ಸಮಿತಿ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!