ಟ್ರೆಂಡಿಂಗ್

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಹಲವರ ಶ್ರಮದಿಂದ ಕನ್ನಡ ಸಮೃದ್ಧವಾಗಿದೆ.. ನಿವೃತ್ತ ಶಿಕ್ಷಕ ಕೆ.ಬಿ.ಶ್ರೀನಿವಾಸ್

ಕುಶಾಲನಗರ, ನ 01:ಸಾಕಷ್ಟು ಹಿರಿಯರು ನಿಸ್ಪಕ್ಷಪಾತವಾಗಿ ಕನ್ನಡ ಭಾಷೆಯನ್ನು ಕಟ್ಟಿದ ಪರಿಣಾಮ ಈಗ ಕನ್ನಡ ಸಮೃದ್ಧವಾಗಿದೆ ಎಂದು ನಿವೃತ್ತ ಶಿಕ್ಷಕ ಕೆ.ಬಿ.ಶ್ರೀನಿವಾಸ್ ಅಭಿಪ್ರಾಪಟ್ಟಿದ್ದಾರೆ.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಕಸಾಪ ಕಚೇರಿಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಸಂಸ್ಕೃತವನ್ನೇ ಬಳಸುತ್ತಿದ್ದರು. ಬಸವೇಶ್ವರ ರಂತ ಹಲವು ಮಹಾನ್ ವ್ಯಕ್ತಿಗಳು ಕನ್ನಡ ಭಾಷೆಗೆ ಹೊಸ ಭಾಷ್ಯ ಬರೆದರು. ಕನ್ನಡ ಭಾಷೆಯನ್ನು ಸಾಮಾನ್ಯ ಜನರು ಬಳಸುವಂತೆ ಅತ್ಯಂತ ಸರಳವಾಗಿ ರಚಿಸಿದರು ಎಂದು ವಿವರಿಸಿದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್.ನಾಗೇಶ್ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಎಲ್ಲರೂ ಕಲಿಯುವ ಮೂಲಕ ಪ್ರೀತಿಸುವಂತೆ ಆದಾಗ ಮಾತ್ರ ನಮ್ಮ ಹಿರಿಯರ ಶ್ರಮಕ್ಕೆ ಸಾರ್ಥಕತೆ ದೊರೆಯುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಎಸ್ ನಾಗರಾಜ್, ಕೋಶಾಧಿಕಾರಿ ಕೆ.ವಿ.ಉಮೇಶ್, ನಿರ್ದೇಶಕರಾದ ಬಿ.ಬಿ.ಹೇಮಲತಾ, ಕೆ.ಬಿ.ಮಂಜುನಾಥ್, ಪರಮೇಶ್, ದರ್ಶನ, ಮಂಜು ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!