ಆರೋಪ

ತೊರೆನೂರು ಗ್ರಾಪಂ ಗ್ರಾಮಸಭೆ ಅರ್ಧಕ್ಕೆ‌ ಮೊಟಕು: ಪಿಡಿಒ, ನೋಡಲ್ ಅಧಿಕಾರಿ ವಿರುದ್ದ ಆಕ್ರೋಷ

ಕುಶಾಲನಗರ, ಅ 25 : ಗ್ರಾಮದ ಹಾಗೂ ಜನರ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾದ ತೊರೆನೂರು ಪಂಚಾಯತಿ ಗ್ರಾಮಸಭೆಯನ್ನು ಅರ್ಧಕ್ಕೆ ಮೊಟಕು ಗೊಳಿಸಿ ಅಭಿವೃದ್ಧಿ ಅಧಿಕಾರಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಟಿ.ಕೆ.ಪಾಂಡುರಂಗ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊರೆನೂರು ಗ್ರಾಮ ಪಂಚಾಯತಿ ವತಿಯಿಂದ ಇಂದು ಅರಿಸಿನಗುಪ್ಪೆ ಗ್ರಾಮದಲ್ಲಿ ಆಯೋಜಿಸಿದ್ದ 2024ನೇ ಸಾಲಿನ ಗ್ರಾಮಸಭೆಯಲ್ಲಿ ಕೆಲವು ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ನಂತರ ಗ್ರಾಮಸ್ಥರು ಅವರ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡದೆ ಸಭೆಯನ್ನು ಅಧಿಕಾರಿ ಶ್ಯಾಮ್ ತಮ್ಮಯ್ಯ ಅರ್ಧಕ್ಕೆ ಅಂತ್ಯಗೊಳಿಸಿದರು.ನಮ್ಮ ಸಮಸ್ಯೆಗಳನ್ನು ಆಲಿಸಿ ಎಂದು ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಮಂಡಳಿಗೆ ಮನವಿ ಮಾಡಿದರೂ ಸರಿಯಾಗಿ ಸ್ಪಂದಿಸದ ನಿರ್ಲಕ್ಷ್ಯ ತೋರಿದ್ದರು ಎಂದು ಪಾಂಡುರಂಗ ಅಸಮಧಾನ ವ್ಯಕ್ತಪಡಿಸಿದರು. ನೋಡೆಲ್ ಅಧಿಕಾರಿಗಳಾದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕಾಳ ನಾಯಕ ಕೂಡ ಸರ್ಕಾರದ ನಿಯಮದ ಪ್ರಕಾರ ಗ್ರಾಮಸಭೆ ನಡೆಸಬೇಕು ಎಂದು ಆಡಳಿತ ಮಂಡಳಿಗಾಗಲಿ ಅಥವಾ ಅಭಿವೃದ್ಧಿ ಅಧಿಕಾರಿಗಾಗಲಿ ಸೂಚನೆ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪ್ರಮುಖ ಇಲಾಖೆಯ ಅಧಿಕಾರಿಗಳ ಗೈರು ಹಾಜರಿ ನಡುವೆಯೇ ಕಾಟಾಚಾರಕ್ಕಾಗಿ ಸಭೆಯನ್ನು ನಡೆಸಿ ಮುಕ್ತಾಯಗೊಳಿಸಿದರು ಎಂದು ಹೇಳಿದರು.

ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿ.ಡಿ.ರವಿ ಮಾತನಾಡಿ, ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ಈ ಯೋಜನೆ ವಿಫಲವಾಗಿರುವ‌ ಬಗ್ಗೆ ಸಭೆಯಲ್ಲಿ ಸಮರ್ಪಕ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲರಾದರು. ಈಗಾಗಲೇ ಜಲಜೀವನ್ ಮಿಷನ್ ಗುತ್ತಿಗೆದಾರರಿಗೆ ಹತ್ತು ಲಕ್ಷ ಹಣವನ್ನು ಬಿಡುಗಡೆ ಮಾಡಿದ್ದರೆ.ಆದರೆ ಗುತ್ತಿಗೆದಾರ ಅರ್ಧಕ್ಕೆ ಕಾಮಗಾರಿಯನ್ನು ಸ್ಥಗಿತಗೊಂಡಿದ್ದರು ಇದುವರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪ್ರಚಾರ ಮಾಡದೆ ವಾರ್ಡ್ ಸಭೆಯನ್ನು ನಡೆಸಿದರು ಎಂದು ದೂರಿದರು. ಸಭೆಯಲ್ಲಿ ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದನ್ನು ಖಂಡಿಸಿ ಬುಧವಾರ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ವಿಎಸ್ಎಸ್ಎನ್ ನಿರ್ದೇಶಕ ಎಚ್.ಸಿ.ಮೂರ್ತಿ ಮಾತನಾಡಿ,
ಗ್ರಾಮಸಭೆಯನ್ನು ಪರಿಪೂರ್ಣವಾಗಿ ನಡೆಸುವಲ್ಲಿ ಅಧ್ಯಕ್ಷರು,ಅಭಿವೃದ್ಧಿ ಅಧಿಕಾರಿಗಳು ವಿಫಲರಾಗಿದ್ದಾರೆ.ಸಭೆಯನ್ನು ಕಾಟಾಚಾರಕ್ಕಾಗಿ ನಡೆಸಿ ಮುಕ್ತಾಯಗೊಳಿಸಿದರು.ಆದರೆ ಜನರಿಗೆ ಸಭೆಯಿಂದ ಯಾವುದೇ ಪ್ರಯೋಜನ ಆಗಿಲ್ಲ.ಈ ಬಗ್ಗೆ ಉನ್ನತ ಅಧಿಕಾರಿಗಳು ತನಿಖೆ ನಡೆಸಿ ಪಿಡಿಓ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಟಿ.ಬಿ.ಜಗದೀಶ್,ಭೂ ನ್ಯಾಯ ಮಂಡಳಿ ಸದಸ್ಯ ಸಂಜೀವಯ್ಯ,
ವಿಎಸ್ಎಸ್ಎನ್ ನಿರ್ದೇಶಕ ಎಚ್.ಸಿ.ಮೂರ್ತಿ, ಎ.ಎಲ್.ಮೂರ್ತಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!