ಕುಶಾಲನಗರ, ಅ 18 : ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿ ನದಿ ದಂಡೆಯಲ್ಲಿನ ಕಾವೇರಿ ಮಾತೆಗೆ ತುಲಾಸಂಕ್ರಮಣದ ಅಂಗವಾಗಿ ಕುಶಾಲನಗರದ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ವಿಶೇಷ ಅಲಂಕಾರ ಹಾಗೂ ಮಹಾಪೂಜೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ನೆರೆದಿದ್ದ ಸಹಸ್ರ ಸಂಖ್ಯೆಯ ಭಕ್ತಾಧಿಗಳಿಗೆ ಪ್ರತೀ ವರ್ಷದಂತೆ ಈ ವರ್ಷವೂ ಕಾವೇರಿ ತೀರ್ಥ ವಿತರಿಸಿ ಅನ್ನದಾನ ನೆರವೇರಿಸಲಾಯಿತು.
ಕುಶಾಲನಗರ ತಾಲ್ಲೂಕಿನ ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ಎಸ್ ಎಲ್ ಎನ್ ಕಾಫಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಮೊದಲಾದವರು ಭಾಗಿಯಾಗಿ ಪೂಜೆ ಸಲ್ಲಿಸಿ ತೀರ್ಥ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಾರವಿ ಕನ್ನಡ ಸಂಘದ ರವೀಂದ್ರ ಪ್ರಸಾದ್, ಕೊಡಗಿನ ಕುಲದೈವ ಕಾವೇರಿ ಸಂಕ್ರಮಣದ ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಕೊಡಗು ಹಾಗೂ ಮೈಸೂರು ಜಿಲ್ಲೆಯ ಭಕ್ತರಿಗೆ ಹತ್ತು ಸಾವಿರ ಬಾಟಲಿಗಳಷ್ಟು ಕಾವೇರಿ ತೀರ್ಥವನ್ನು ವಿತರಿಸಲಾಯಿತು.
ಹಾಗೆಯೇ 8 ಸಾವಿರ ಮಂದಿಗೆ ಅನ್ನದಾನ ಕೈಂಕರ್ಯ ಭಕ್ತರ ನೆರವಿನಿಂದ ನಡೆಸಲಾಯಿತು.
ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಿ ನಾಡು ಸಮೃದ್ಧವಾಗಲೆಂದು ಮಹಾತಾಯಿ ಕಾವೇರಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.
ಈ ಸಂದರ್ಭ
ರವಿಚಂದ್ರನ್ ಕನ್ನಡ ಸಂಘದ ಪದಾಧಿಕಾರಿಗಳಾದ ವಿಜೇಂದ್ರಪ್ರಸಾದ್, ಬಬೀಂದ್ರಪ್ರಸಾದ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕ ಚಂದ್ರಮೋಹನ್,
ಗಣಪತಿ ದೇವಾಲಯ ಸಮಿತಿಯ ಚಂದ್ರು, ತಾಪಂ ಮಾಜಿ ಸದಸ್ಯ ಮಹದೇವ್, ಅಡುಗೆ ರುದ್ರ, ಎಸ್.ಎಲ್.ಎನ್ ಸಂಸ್ಥೆಯ ವೆಂಕಟಾಚಲಂ
ಮೊದಲಾದವರಿದ್ದರು.
ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ವಿಧಿ ನಡೆಸಿಕೊಟ್ಟರು.
Back to top button
error: Content is protected !!