ಕಾರ್ಯಕ್ರಮ

ಗುಡ್ಡೆಹೊಸೂರಿನಲ್ಲಿ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಕುಸಿಯುತ್ತಿರುವ ವಿಶ್ವಾಸಾರ್ಹತೆ : ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯ -ವಿ.ಪಿ. ಶಶಿಧರ್

ಗುಡ್ಡೆಹೊಸೂರು, ಸೆ 14:  : ಜೀವನ ಮೌಲ್ಯಗಳು ಕುಸಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದು, ಸಮಾಜದ 4ನೇ ಅಂಗ ಎನ್ನಿಸಿಕೊಂಡಿರುವ ಪತ್ರಿಕಾರಂಗ ಕೂಡ ನಾನಾ ಕಾರಣಗಳಿಂದ ಕಾವಲು ಹಾದಿಯಲ್ಲಿದೆ. ವಿಶ್ವಾಸರ್ಹತೆ ಕೂಡ ಕುಸಿಯುವ ಹಂತಕ್ಕೆ ಬಂದಿದ್ದು, ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಂಡು ಎಚ್ಚೆತುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ.ಪಿ.ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಿAದ ಶನಿವಾರ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಆಯೋಜಿತಗೊಂಡ ನೇಗಿಲಯೋಗಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಒಳ್ಳೆಯವರಿಗೆ ಮತ್ತು ಒಳ್ಳೆಯದಕ್ಕೆ ಅವಕಾಶ ಮತ್ತು ಪುರಸ್ಕಾರಗಳಿಲ್ಲ. ಬದಲಾಗಿ ಹಣ ಮತ್ತು ಅಧಿಕಾರ ಇರುವವರು ಅಪರಾಧಿಯೇ ಆಗಿದ್ದರೂ ಜೈಕಾರ ಹಾಕುವ ಸಂಕೀರ್ಣ ಕಾಲಘಟ್ಟದಲ್ಲಿದ್ದು, ಬಡವಾಳ ಶಾಹಿಗಳು ಮತ್ತು ಉದ್ಯಮಿಗಳ ಹಿಡಿತದಲ್ಲಿರುವ ಹೆಚ್ಚಿನ ಮುದ್ರಣ ಮತ್ತು ದೃಶ್ಯ ಮಾದ್ಯಮಗಳು ಅವರ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೆರುವ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾರಂಗ ವೃತ್ತಿ ಧರ್ಮ ವಸ್ತುನಿಷ್ಠ ಮತ್ತು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಸಮಾಜದ ಅಂಕುಡೊAಕುಗಳನ್ನು ತಿದ್ದಬೇಕು. ಜೋತೆಗೆ ಧ್ವನಿ ಇಲ್ಲದವರ, ದುರ್ಬಲರ ಧ್ವನಿಯಾಗಬೇಕು. ಸಮಾಜದಲ್ಲಿ ಯುವಜನತೆಯ ಪಾತ್ರ ಬಹುಮುಖ್ಯವಾಗಿದ್ದು, ಅವರನ್ನು ಸೃಜನಾತ್ಮಕ ರಚನಾತ್ಮಕ ಹಾಗೂ ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕೆAದು ಹೇಳಿದ ಅವರು, ಈ ನಿಟ್ಟಿನಲ್ಲಿ ಪತ್ರಿಕಾರಂಗದ ಪಾತ್ರ ಮತ್ತು ಜವಾಬ್ದಾರಿ ತುಂಬಾ ದೊಡ್ಡದಿದೆ ಎಂದು ವಿಶ್ಲೇಷಿದರು.
ಕೃಷಿಯನ್ನು ನಂಬಿಕೊAಡು ಯಾರು ಸೋತ್ತಿಲ್ಲ. ಕೃಷಿ ನಮ್ಮ ನಾಗರೀಕತೆಯ ಮೊದಲ ಉದ್ಯೋಗ ಎಂದು ಬಣ್ಣಿಸಿದ ಅವರು, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವಿಭಿನ್ನ ವಿಶಿಷ್ಟ ಶೈಲಿಯ ಕೃಷಿಕರನ್ನು ಗೌರವಿಸುವ ಕಾರ್ಯಕ್ರಮವನ್ನು ಅಭಿನಂದಿಸಿದರು.
ರೈತರಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ತಂದೆ-ತಾಯಿ ಹೆಸರಿನಲ್ಲಿ ದತ್ತಿನಿಧಿ ಸ್ಥಾಪನೆ ಮಾಡಿರುವ ಕಂಬಿಬಾಣೆಯ ಕಾಫಿ ಬೆಳೆಗಾರರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ, ರೈತರಿಗೆ ಮತ್ತು ಇತರ ಕೃಷಿಕರಿಗೆ ಕೃಷಿ ಹಾಗೂ ತೋಟಗಾರಿಕಾÀ ಇಲಾಖೆಗಳಿಂದ ಯಾವುದೇ ಮಾರ್ಗದರ್ಶನ ಇಲ್ಲವೆಂದು ವಿಷಾಧಿಸಿರಲ್ಲದೆ, ರೈತರು ಮತ್ತು ಕಾಫಿ ಬೆಳೆಗಾರರು ಕಾಡಾನೆಗಳ ಕಾಟದಿಂದ ಹೈರಾಣಾಗಿದ್ದು, ಸರ್ಕಾರದಿಂದ ಯಾವುದೇ ಕಾರ್ಯಕ್ರಮಗಳು ಹೋಗಲಿ, ಕನಿಷ್ಠ ಸಾಂತ್ವನಗಳು ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ ಸಂಘದ ಕಾರ್ಯಕ್ರಮಗಳನ್ನು ಶ್ಲಾಘಿಸಿದರಲ್ಲದೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲೆAದು ಹಾರೈಸಿದರು.
ಸುಂಟಿಕೊಪ್ಪ 1 ಗ್ರೇಡ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ ನಮ್ಮ ದೇಶವು ಕೃಷಿ ಪ್ರಧಾನ ದೇಶವಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ತಂತ್ರಜ್ಞಾನ ಬದಲಾವಣೆಗಳು ಆಗಿರುವ ಹಿನ್ನಲೆಯಲ್ಲಿ ಕೃಷಿ ಕ್ಷೇತ್ರದ ಸಾಕಷ್ಟು ಬದಲಾವಣೆಗಲು ಆಗುತ್ತಿವೆ ರಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಕೆಯಲ್ಲಿ ಕೃಷಿ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬ ಸಾಧಕ-ಭಾದಕಗಳನ್ನು ತಿಳಿಯುವ ಪ್ರಯತ್ನವಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಎ.ಮರುಳೀಧರ್ ಮತ್ತು ಗುಡ್ಡೆಹೊಸೂರು ಗ್ರಾ.ಪಂ.ಸದಸ್ಯ ಮತ್ತು ಉದ್ಯಮಿ ಕೆ.ಆರ್.ನಿತ್ಯಾನಂದ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿಘ್ನೇಶ್ ಎಂ.ಭೂತನಕಾಡು ವಹಿಸಿದ್ದರು.
ಕರ್ಯಕ್ರಮದಲ್ಲಿ ಅರಶಿನಗುಪ್ಪೆ ಗ್ರಾಮದ ಬೆಣ್ಣೆ ಹಣ್ಣು ಶುಂಠಿ ಬೆಳೆಗಾರರಾದ ಎಂ.ಟಿ.ಬೇಬಿ, ಹೈನುಗಾರಿಕೆಯಲ್ಲಿ ಗುಡ್ಡೆಹೊಸೂರಿನ ಸಾಗರ್, ಸಮಗ್ರ ಕೃಷಿ ಸಾಧಕ ನಾಕೂರು ಶಿರಂಗಾಲದ ಪಿ.ಎಂ.ಬಿಜು, ಗುಡ್ಡೆಹೊಸೂರಿನ ನಿವಾಸಿ ಕೃಷಿಯಲ್ಲಿ ಸಾಧನೆ ಮಾಡಿದ ಮಹಿಳೆ ವಸಂತಿ ಪೊನ್ನಪ್ಪ, ಅತ್ತೂರು ಗ್ರಾಮ ಯುವ ಕೃಷಿಕ ಎಂ.ಸಜಿತ್ ಅವರಿಗೆ ನೇಗಿಲಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದದಲ್ಲಿ ಪ್ರವೀಣ್ ಕುಮಾರ್ ಪ್ರಾರ್ಥಿಸಿ, ವಿಘ್ನೇಶ್ ಭೂತನಕಾಡು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳಾನ್ನಾಡಿದರು. ಕೆ.ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರೆ ವಿ.ಸಿ.ನವೀನ್ ಚಿಣ್ಣಪ್ಪ ವಂದಿಸಿದರು.
ಎರಡು ದತ್ತಿ ಪ್ರಶಸ್ತಿ ಘೋಷಣೆ:
ಕಂಬಿಬಾಣೆಯ ಕಾಫಿ ಬೆಳೆಗಾರ ಟಿ.ಕೆ. ಸಾಯಿ ಕುಮಾರ್ ಅವರು ಕುಶಾಲನಗರ ತಾಲೂಕು ಪತ್ರಕರ್ತರ ಸಂಘದಲ್ಲಿ ಅತ್ಯುತ್ತಮ ಅವಿಭಕ್ತ ಕುಟುಂಬಗಳಿಗೆ ಗೌರವಿಸಲು ರೂ 25,000 ಮೊತ್ತದ ದತ್ತಿ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಗುಡ್ಡೆಹೊಸೂರುವಿನ ಮಹಿಳಾ ಕೃಷಿಕರಾದ ಕೊರವಂಡ ವಸಂತಿ ಪೊನ್ನಪ್ಪ ಅವರು ಕೂಡ ತಾಲೂಕು ಪತ್ರಕರ್ತರ ಸಂಘದಲ್ಲಿ ರು.25,000 ಮೊತ್ತದ ದತ್ತಿ ಪ್ರಶಸ್ತಿ ನೀಡುವುದಾಗಿ ಕಾರ್ಯಕ್ರಮದಲ್ಲಿ ಘೋಷಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!