ಕಾರ್ಯಕ್ರಮ

ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರಧಾನ ಸಮ್ಮೇಳನ

ಕುಶಾಲನಗರ, ಆ 29: ಹೆಣ್ಣು ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಶಿಕ್ಷಣ ವನ್ನು ಕಡ್ಡಾಯವಾಗಿ ನೀಡುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಸಮಸ್ತ ಕೇರಳ ಕೇಂದ್ರ ಮುಶಾವರ ಸಮಿತಿಯ ಸದಸ್ಯರಾದ ಎಂ ಅಬ್ದುಲ್ಲಾ ಫೈಝಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದ ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರಧಾನ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣ ನೀಡುವ ಮೂಲಕ ಯುವ ಪೀಳಿಗೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಪೋಷಕರು ಲೋಪದೋಷ ಮಾಡಬಾರದು ಎಂದು ಹೇಳಿದ ಅವರು ಪೋಷಕರು ತಪ್ಪು ಮಾಡಿದ್ದಲ್ಲಿ ಇಡೀ ಸಮಾಜವೇ ಏರುಪೇರು ಆಗುವ ಸಾಧ್ಯತೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಉಲೂಂ ಮದರಸ ಮತ್ತು ಫಾಳಿಲಾ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಎಂ ತಮ್ಲೀಕ್ ದಾರಿಮಿ, ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆದಲ್ಲಿ ಇಡೀ ಕುಟುಂಬದ ಅಭಿವೃದ್ಧಿ ಮತ್ತು ಏಳಿಗೆ ಸಾಧ್ಯ ಎಂದ ಅವರು, ಶಿಕ್ಷಣದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಸಾಧ್ಯ ಎಂದು ಹೇಳಿದರು.
ಸಮುದಾಯದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಸರಕಾರಿ ಇಲಾಖೆಗಳಲ್ಲಿ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದ ಅವರು,
ಈ ಸಂಬಂಧ ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಬೇಕಾಗಿದೆ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ಜ್ಞಾನದ ಅರಿವು ಅಗತ್ಯ, ಶಿಕ್ಷಣ ಕ್ರಾಂತಿ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಪ್ರತಿಯೊಬ್ಬರೂ ಧಾರ್ಮಿಕ ಹಾಗೂ ಕೌಟುಂಬಿಕ ವಿಷಯಗಳ ಬಗ್ಗೆ ಅಧ್ಯಯನ ನಡೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷರಾದ ಕೆ ಎ ಯಾಕೂಬ್ ಅವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮಕ್ಕೂ ಮುನ್ನ ಮಹಿಳಾಸಂಗಮ ಕಾರ್ಯಾಗಾರ ನಡೆಯಿತು. ಹಿಲಾಲ್ ಮಸೀದಿಯ ಧರ್ಮಗುರುಗಳಾದ ನಾಸಿರ್ ಫೈಝಿ ಅವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಧರ್ಮ ಗುರುಗಳಿಂದ ಧಾರ್ಮಿಕ ಪಾರಾಯಣ ನಡೆಯಿತು.
22 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ನೆರವೇರಿಸಲಾಯಿತು..
ಹಿಲಾಲ್ ಮಸೀದಿ ಕಾರ್ಯದರ್ಶಿಗಳು ಹಾಗೂ ದಾರುಲ್ ಉಲೂಂ ಮದರಸ ಮತ್ತು ಕಾಲೇಜಿನ ಪ್ರಮುಖರಾದ ಅಬ್ದುಲ್ ಮಜೀದ್ ಅವರು ಮಾತನಾಡಿ, ಸಮುದಾಯದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ಹಿಲಾಲ್ ಮಸೀದಿ ಮತ್ತು ಮದರಸ ಹಾಗೂ ಕಾಲೇಜಿನ ಅಧ್ಯಕ್ಷರಾದ ಎಂಎಂಎಸ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೀಫ್ ಫೈಝಿ ಅವರು ಸಂದೇಶ ನುಡಿಗಳನಾಡಿದರು.
ಹಿಲಾಲ್ ಮಸೀದಿ ಮತ್ತು ಮದರಸ ಉಪಾಧ್ಯಕ್ಷರಾದ ಹಂಸ ಹಾಜಿ, ಶನಿವಾರ ಸಂತೆ ಧರ್ಮ ಗುರುಗಳಾದ ಸೂಫಿ ದಾರಿಮಿ, ಪ್ರಮುಖರಾದ ಬಿ ರಫೀಕ್, ಮಾಜಿ ಅಧ್ಯಕ್ಷರಾದ ಬಿ ಎಚ್ ಅಹಮದ್ ಹಾಜಿ, ಎ ಎ ಸಲೀಂ, ಉನೈಸ್ ಫೈಝಿ , ರಾಝಿಖ್ ರೆಹ್ಮನಿ, ಮತ್ತು ಮದರಸ ಹಾಗೂ ಮಸೀದಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳ ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!