ಪ್ರತಿಭಟನೆ

ಕುಶಾಲನಗರದಲ್ಲಿ ಪಶುವೈದ್ಯರಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

ಕುಶಾಲನಗರ, ಮಾ 24:
ಶಿವಮೊಗ್ಗದ ಹುಲಿ ಮತ್ತು ಸಿಂಹ ಧಾಮದಲ್ಲಿ ನೀರಾನೆ ಧಾಳಿಯಿಂದ ಮರಣ ಹೊಂದಿದ ಡಾ. ಸಮೀಕ್ಷಾ ರೆಡ್ಡಿ ಸಾವನ್ನು ಖಂಡಿಸಿ ಕುಶಾಲನಗರ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಪಶು ವೈದ್ಯಕೀಯ ಸಂಘ ಕೊಡಗು ಶಾಖಾ ವತಿಯಿಂದ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸಲಾಯಿತು.
ಮೃತನ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕು ಮತ್ತು ತಪ್ಪಿಸ್ತರಿಗೆ ಶಿಕ್ಷೆ ಆಗಬೇಕೆಂದು ಸಂಘದ ಅಧ್ಯಕ್ಷ ಡಾ. ಲಿಂಗರಾಜ್ ದೊಡ್ಡಮನಿ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಶುವೈದ್ಯರಾದ ಡಾ. ಸಂಜೀವ ಕುಮಾರ್ ಶಿಂಧೆ, ಡಾ. ಸಿದ್ದಲಿಂಗಯ್ಯ ಹಿರೇಮಠ, ಡಾ. ಅಮೃತಾ ಹಾಗೂ ಇಲಾಖೆ ಸಿಬ್ಬಂದಿಗಳಾದ ಸತ್ತರ್ ಖಾನ್, ಮೀನಾಕ್ಷಿ, ಶೋಭಾವತಿ, ಭವ್ಯ, ಗಣೇಶ್, ಪನ್ನೀರ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!